ವಿಹೆಚ್ ಪಿ, ಬಜರಂಗ ದಳದಿಂದ ಪ್ರತಿಭಟನೆ ವೇಳೆ  ‘ಕುರಾನ್ ಜಿಂದಾಬಾದ್’ ಕೂಗಿದ ಯುವಕ: ಲಾಠಿಚಾರ್ಚ್, ಬಿಗುವಿನ ವಾತಾವರಣ.

ಹಾಸನ,ಮಾರ್ಚ್,28,2023(www.justkannada.in): ಬೇಲೂರಿನ ಚನ್ನಕೇಶವ ರಥೋತ್ಸವ ವೇಳೆ ಕುರಾನ್ ಪಠಣ ಮಾಡದಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.

ಹಾಸನ ಜಿಲ್ಲೆ ಬೇಲೂರಿನಲ್ಲಿ ಏಪ್ರಿಲ್ 4 ರಂದು ಚನ್ನಕೇಶವ ರಥೋತ್ಸವ ನಡೆಯಲಿದೆ. ಈ ವೇಳೆ ಕುರಾನ್ ಪಠಣ ಮಾಡಬಾರದು. ಕುರಾನ್ ಪಠಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ  ವಿಹೆಚ್ ಪಿ, ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ಯುವಕನೋರ್ವ ಕುರಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ಇದರಿಂದಾಗಿ ವಿಹೆಚ್ ಪಿ ಬಜರಂಗ ದಳದ ಕಾರ್ಯಕರ್ತರು ಮತ್ತು ಮುಸ್ಲಿಂ ಯುವಕನ ನಡುವೆ ವಾಗ್ವಾದ ನಡೆದಿದ್ದು ತಕ್ಷಣ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್ ಮಾಡಿದ್ದಾರೆ. ನಂತರ ಘೋಷಣೆ ಕೂಗಿದ ಯುವಕನನ್ನ ಪೊಲೀಸರು ವಶಕ್ಕೆ ಪಡೆದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Key words:  shouted- Quran – protest – VHP- Bajrang Dal-hassan