Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Crime ಹನೂರು ಶಾಗ್ಯ ಶೂಟೌಟ್: ಜಪ್ತಿ ವಸ್ತುಗಳೇ ಹುಟ್ಟಿಸಿದ ಅನುಮಾನ!

ಹನೂರು ಶಾಗ್ಯ ಶೂಟೌಟ್: ಜಪ್ತಿ ವಸ್ತುಗಳೇ ಹುಟ್ಟಿಸಿದ ಅನುಮಾನ!

ಚಾಮರಾಜನಗರ,ಆಗಸ್ಟ್,17,2026 (www.justkannada.in):  ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಆಗಸ್ಟ್ 15ರಂದು ನಡೆದ ಗುಂಡಿನ ಚಕಮಕಿಯ ಪ್ರಕರಣ ಇದೀಗ ಜಪ್ತಿ ವಸ್ತುಗಳ ಸುತ್ತ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಬೇಟೆಗಾರರಿಂದ ಎರಡು ಚೀಲಗಳಲ್ಲಿ ಸುಮಾರು 20ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸ, ಎರಡು ನಾಡ ಬಂದೂಕುಗಳು, ಟಾರ್ಚ್‌ ಲೈಟ್‌ ಗಳು, ಮದ್ದು-ಗುಂಡುಗಳು ಸೇರಿದಂತೆ ಹಲವು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ, ಈ ಜಪ್ತಿ ವಸ್ತುಗಳ ಪೈಕಿ ಸ್ಟಿಕ್ಕರ್ ಕೂಡ ಕಳಚದ ಹೊಸ ಚಪ್ಪಲಿಗಳು ಪತ್ತೆಯಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಕಾಡಿಗೆ ಬೇಟೆಗೆ ತೆರಳಿದವರು ಬಳಸಿದ್ದರೆನ್ನಲಾದ ಚಪ್ಪಲಿಗಳು ಹೊಸದಾಗಿರುವುದು ಹೇಗೆ? ಅವುಗಳನ್ನು ನಿಜವಾಗಿಯೂ ಧರಿಸಲಾಗಿತ್ತೇ ಎಂಬ ಪ್ರಶ್ನೆಯೂ ಮೂಡಿದೆ.ಹನೂರು ಶಾಗ್ಯ ಶೂಟೌಟ್: ಜಪ್ತಿ ವಸ್ತುಗಳೇ ಹುಟ್ಟಿಸಿದ ಅನುಮಾನ! SHOOT.jpg1

ರಾತ್ರಿ ಮೂರು ಗಂಟೆಗೆ ರಕ್ಷಿತಾರಣ್ಯ ಪ್ರವೇಶಿಸಿದವರು ದನ ಕಾಯುವವರೇ ಎಂಬ ವಾದಗಳು ಕೇಳಿಬರುತ್ತಿರುವ ಬೆನ್ನಲ್ಲೇ, ವನ್ಯಪ್ರಾಣಿ ಮಾಂಸ, ಎರಡು ನಾಡ ಬಂದೂಕುಗಳು ಹಾಗೂ ಬೇಟೆಗೆ ಬಳಸಬಹುದಾದ ಪರಿಕರಗಳು ಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ.ಹನೂರು ಶಾಗ್ಯ ಶೂಟೌಟ್ SHOOT

ಅರಣ್ಯಾಧಿಕಾರಿಗಳ ಮೇಲೆಯೇ ತಪ್ಪಿನ ಆರೋಪ ಮಾಡುತ್ತಿರುವವರು ಮೊದಲು ಜಪ್ತಿ ವಸ್ತುಗಳ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕಿದೆ.ಜಪ್ತಿ ವಸ್ತುಗಳೇ ಹುಟ್ಟಿಸಿದ ಅನುಮಾನ! jk02_new jk02 new

ಹೊಸ ಚಪ್ಪಲಿ… ಕೈಯಲ್ಲಿದ್ದ ಬಂದೂಕು… ಚೀಲದಲ್ಲಿದ್ದ ಮಾಂಸ…ಶಾಗ್ಯ ಶೂಟೌಟ್‌ನಲ್ಲಿ ನಿಜಕ್ಕೂ ರಾತ್ರಿ ಕಾಡಿಗೆ ಹೋಗಿದ್ದವರು ಯಾರು?ಈ ಪ್ರಶ್ನೆಗಳಿಗೆ ತನಿಖೆಯೇ ಉತ್ತರ ನೀಡಬೇಕಿದೆ.

ENGLISH SUMMARY..

HANUR SHAGYA SHOOTOUT: SEIZED ITEMS RAISE QUESTIONS

Chamarajanagar: The August 15 shootout in Shagya forest, Hanur, has raised fresh questions over the seized items.

Forest officials reportedly recovered 20–30 kg of wildlife meat, two country-made guns, ammunition, torchlights and other hunting equipment from the suspects.

But the discovery of brand-new slippers with the stickers still intact has sparked suspicion.

Were the slippers actually used in the forest? Who entered the protected forest at 3 a.m.?

The seized items and the circumstances surrounding the shootout now demand a clear and impartial investigation.

Key words: shootout, Shagya forest, Hanur, fresh questions, seized items