Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಲಕ್ಷ್ಮಣ ತೀರ್ಥಕ್ಕೆ ತೋರಿದ ಕಾಳಜಿ ಕಬಿನಿಗೂ ತೋrರಿಸಿ-ಶಾಸಕರಿಗೆ ಆಗ್ರಹ

ಲಕ್ಷ್ಮಣ ತೀರ್ಥಕ್ಕೆ ತೋರಿದ ಕಾಳಜಿ ಕಬಿನಿಗೂ ತೋrರಿಸಿ-ಶಾಸಕರಿಗೆ ಆಗ್ರಹ

ಮೈಸೂರು,ಆಗಸ್ಟ್,17,2026 (www.justkannada.in): ಕಬಿನಿ ಉಳಿವಿಗಾಗಿ ಶ್ರಮಿಸಿ, ಲಕ್ಷ್ಮಣತೀರ್ಥಕ್ಕೆ ತೋರಿದ ಕಾಳಜಿ ಕಬಿನಿಗೂ ತೋರಲಿ ಎಂದು ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸೇವ್ ಕಬಿನಿ ತಂಡ ಆಗ್ರಹಿಸಿದೆ.

ಮೈಸೂರಿನಲ್ಲಿ ಸೇವ್ ಕಬಿನಿ ಟೀಂ ಸುದ್ದಿಗೋಷ್ಠಿ ನಡೆಸಿತು.  ಸಿಎಂ, ಗೃಹಸಚಿವರು, ಎಂಎಲ್ಎ ಅವರ ಮಕ್ಕಳು ಕುಡಿಯುತ್ತಿರುವುದು ಇದೇ ಕಬಿನಿ ನೀರು. ಬೆಂಗಳೂರು, ಮೈಸೂರು ಸೇರಿದಂತೆ ಎರಡು ಕೋಟಿ ಜನರು ಕುಡಿಯವು ನೀರಲ್ಲ ವಿಷ ಕುಡಿಯುತ್ತಿದ್ದಾರೆ. ಹೀಗಾಗಿ ಶಾಸಕ‌ ಅನಿಲ್ ಚಿಕ್ಕಮಾದು ಅವರು ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಬೇಕು ಲಕ್ಷ್ಮಣತೀರ್ಥಕ್ಕೆ  ಹಣ ಬಿಡುಗಡೆ ಮಾಡಿಸಿದಂತೆ ಕಬಿನಿ ಉಳಿವಿಗೂ  ಹಣ ಬಿಡುಗಡೆ ಮಾಡಿಸಿ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ.ಇಲ್ಲವಾದರೆ ಎಸ್ಪಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಲಕ್ಷ್ಮಣ ತೀರ್ಥಕ್ಕೆ ತೋರಿದ ಕಾಳಜಿ ಕಬಿನಿಗೂ ತೋrರಿಸಿ-ಶಾಸಕರಿಗೆ ಆಗ್ರಹ anil

ತಪ್ಪಿತಸ್ಥರ ವಿರುದ್ದ ಕೇವಲ ಎನ್ ಸಿಆರ್ ದಾಖಲಿಸಿದರೆ ಸಾಲದು ಎಫ್ ಐ ಆರ್ ದಾಖಲಿಸಿ ಎಂದು  ಸೇವ್ ಕಬಿನಿ ಟೀಂ ಆಗ್ರಹಿಸಿದೆ. ವಕೀಲ ವಿ.ರವಿಕುಮಾರ್, ಮಂಜುಕಿರಣ್, ಮಧುಕೇಶ್  ಸೇರಿ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಲಕ್ಷ್ಮಣ ತೀರ್ಥಕ್ಕೆ ತೋರಿದ ಕಾಳಜಿ ಕಬಿನಿಗೂ ತೋrರಿಸಿ jk02_new jk02 new

Key words: Lakshmana Tirtha, kabini, – MLA, Kabini Save Team