ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತೆ ಶಾಕ್: ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಹೆಚ್ಚಳ.

ನವದೆಹಲಿ,ಸೆಪ್ಟಂಬರ್,1,2021(www.justkannada.in):  ಕೊರೋನಾ, ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿ ನರಳುತ್ತಿರುವ ದೇಶದ ಜನರಿಗೆ ಇದೀಗ ಮತ್ತೆ ಬೆಲೆ ಏರಿಕೆಯ ಶಾಕ್ ತಟ್ಟಿದೆ.

ಹೌದು, ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ ಪಿಜಿ) ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ ಮಾಡಲಾಗಿದೆ. ಪ್ರತಿ ಸಿಲಿಂಡರ್ ಗೆ 25 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. 14.2 ಕೆಜಿ ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ ಪಿಜಿ) ಸಿಲಿಂಡರ್ ಗೆ ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 884.50 ರೂ. ತಲುಪಿದೆ. ಬೆಂಗಳೂರಿನಲ್ಲಿ 862 ರೂ ಇದ್ದ ಸಿಲಿಂಡರ್ ಬೆಲೆ ಈಗ 887 ರೂ ಆಗಿದೆ.

ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಆಗಸ್ಟ್ 17 ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್ ಗೆ 25 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 25 ರೂ ಏರಿಕೆ ಮಾಡಲಾಗಿದೆ. 15 ದಿನಗಳ ಅಂತರದಲ್ಲಿ 50 ರೂ. ಏರಿಕೆಯಾಗಿದೆ.  ಜನವರಿ 1ರಿಂದ ಸೆಪ್ಟಂಬರ್ 1ರವರೆಗೆ ಎಲ್ ಪಿಜಿ ಅಡುಗೆ ಅನಿಲದ ಬೆಲೆ 190 ರೂ ಏರಿಕೆಯಾದಂತಾಗಿದೆ.

ಕೊರೊನಾ ಲಾಕ್ ಡೌನ್ ನಿಂದ ಹೊರಬಂದು ಜೀವನ ಸುಧಾರಿಸಿಕೊಳ್ಳುತ್ತಿರುವ ಹೊತ್ತಿನಲ್ಲೆ ಜನರಿಗೆ ಹೀಗೆ ಬೆಲೆ ಏರಿಕೆಯ ಬರೆ  ಬಿದ್ದು ಮತ್ತೆ ಸಂಕಷ್ಟದ ಕೂಪಕ್ಕೆ ಸಿಲುಕುವಂತಾಗುತ್ತಿದೆ.

ENGLISH SUMMARY….

LPG Cylinder prices hiked again
New Delhi, Sept. 1, 2021 (www.justkannada.in): The Government of India has given yet another shock to the people of the country, who have still not recovered from the ill-effects from the COVID-19 Pandemic, effects of lockdown and price hike, by hiking the prices of LPG cylinders again.
The prices of LPG cylinders, without subsidy, have been increased yet again by Rs.25. The price of one 14.2 kg LPG cylinder has been increased to Rs.884.50 in New Delhi. The price of one LPG cylinder in Bengaluru which was Rs.862 has now reached Rs.887.
The Govt. of India had increased the price of LPG cylinders without subsidy by Rs. 25 on August 17. Now again the price is increased by Rs.25. Thus there has been an increase of Rs.50 per cylinder. The price of the LPG cylinder has been increased by Rs.190 between January 1 and September 1.
The people who are still suffering due to the lockdown and price hike have received a shock from the increase.
Keywords: Govt. of India/ LPG cylinder/ price hike

Key words: Shock -again –price- hike-Increase – LPG- Cylinder Price