ಕಲ್ಲು ಗಣಿಗಾರಿಕೆಯಿಂದ ನಂದಿಬೆಟ್ಟಕ್ಕೆ ಕುತ್ತು ವಿಚಾರ: ಅಕ್ರಮ ಪತ್ತೆಯಾದ್ರೆ ಕಠಿಣ ಕ್ರಮ- ಗಣಿ ಸಚಿವ ಹಾಲಪ್ಪ ಆಚಾರ್.

ಬೆಂಗಳೂರು,ಸೆಪ್ಟಂಬರ್,1,2021(www.justkannada.in): ಕಲ್ಲು ಗಣಗಾರಿಕೆಯಿಂದ ನಂದಿಬೆಟ್ಟಕ್ಕೆ ಕುತ್ತು ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವುದು ಪತ್ತೆಯಾದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಣಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.

ಈ ಸಂಬಂಧ ಸ್ಥಳದಲ್ಲಿ ಪರಿಶೀಲನೆಗೆ ಸಚಿವ ಹಾಲಪ್ಪ ಆಚಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಅಕ್ರಮ ಮಾಡಿರುವುದು ಪತ್ತೆಯಾದರೇ ಯಾರೇ ಆದರೂ ಸರಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ನಾನೂ ಕೂಡ ಭಾನುವಾರ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.

ನಂದಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಾಗುತ್ತಿರುವ ಕಾನೂನುಬಾಹಿರ ಕಲ್ಲುಗಣಿಗಾರಿಕೆಯಿಂದಾಗಿ ಈ ಗುಡ್ಡ ಕುಸಿತವುಂಟಾಗಿರಬಹುದು ಎಂದು ಪರಿಸರವಾದಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Key words: illegal mining – Nandi hills-Strict Action-Minister – Halappa Achar,