Sunday, September 6, 2026

BDA Apartments

Home Front Page ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ.

ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ.

ಟೋಕಿಯೋ,ಆಗಸ್ಟ್,31,2021(www.justkannada.in):  ಟೋಕಿಯೋ ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತ ಮತ್ತೆರೆಡು ಪದಕಕ್ಕೆ ಮುತ್ತಿಕ್ಕಿದೆ.

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ನಡೆದ ಸ್ಪರ್ಧೆಯ ಫೈನಲ್ ನಲ್ಲಿ  ಭಾರತದ ಮರಿಯಪ್ಪನ್ ತಂಗಾವೇಲು ಬೆಳ್ಳಿಪದಕ ಮತ್ತು ಶರದ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ.

ಶರದ್ ತಮ್ಮ ಋತುವಿನ ಅತ್ಯುತ್ತಮ ಪ್ರಯತ್ನವಾದ 1.83 ಮೀ.ನೊಂದಿಗೆ ಮೂರನೇ ಸ್ಥಾನ ಪಡೆದರೆ, ತಂಗವೇಲು 1.86 ಮೀ.ನ ಅತ್ಯುತ್ತಮ ಪ್ರಯತ್ನದಿಂದ ಪೋಡಿಯಂನಲ್ಲಿ ಎರಡನೇ ಸ್ಥಾನ ಪಡೆದರು. ಕಳೆದ ಬಾರಿಯ ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ತಂಗವೇಲು ಚಿನ್ನದ ಪದಕವನ್ನು ಸಂಪಾದಿಸಿದ್ದರು.

ಇನ್ನು ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ ಈಗ 10 ಕ್ಕೆ ತಲುಪಿದೆ. ಎರಡು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚನ್ನ ಭಾರತದ ಕ್ರೀಡಾಪಟುಗಳು ಗೆದ್ದಿದ್ದಾರೆ.

Key words: Tokyo-Para Olympics- India -medal