Saturday, August 22, 2026

BDA Apartments

Home Front Page ಡಮ್ಮಿ ಅಭ್ಯರ್ಥಿ ಎಂದು ಟೀಕಿಸಿದವರೇ ಈಗ ಡಮ್ಮಿಯಾಗಿದ್ದಾರೆ- ಈಶ್ವರಪ್ಪಗೆ ಮಧು ಬಂಗಾರಪ್ಪ ಟಾಂಗ್.

ಡಮ್ಮಿ ಅಭ್ಯರ್ಥಿ ಎಂದು ಟೀಕಿಸಿದವರೇ ಈಗ ಡಮ್ಮಿಯಾಗಿದ್ದಾರೆ- ಈಶ್ವರಪ್ಪಗೆ ಮಧು ಬಂಗಾರಪ್ಪ ಟಾಂಗ್.

ಶಿವಮೊಗ್ಗ,ಏಪ್ರಿಲ್, 4, 2024 (www.justkannada.in):  ಶಿವಮೊಗ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರನ್ನ ಡಮ್ಮಿ ಅಭ್ಯರ್ಥಿ ಎಂದು ಟೀಕಿಸಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ  ಸಚಿವ ಮಧು ಬಂಗಾರಪ್ಪ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ, ಡಮ್ಮಿ ಅಭ್ಯರ್ಥಿ ಟೀಕೆ ಗೀತಾ ಶಿವರಾಜ್ ಕುಮಾರ್ ಗೆ ಅನ್ವಯ ಆಗಲ್ಲ ಗೀತರನ್ನ ಡಮ್ಮಿ ಅಭ್ಯರ್ಥಿ ಎಂದು ಟೀಕಿಸಿದವರೇ ಇಂದು ಡಮ್ಮಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರಗೆ ಜನರ ಮುಂದೆ ಹೋಗುವ ಧೈರ್ಯವಿಲ್ಲ.  ಅವರನ್ನ ನೋಡಿದರೇ  ನನಗೆ ಅಳಬೇಕೋ ನಗಬೇಕೋ ಗೊತ್ತಾಗುತ್ತುಇಲ್ಲ ಎಂದು ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

ಪುತ್ರ ಕಾಂತೇಶ್ ಗೆ ಟಿಕೆಟ್ ಕೈತಪ್ಪಿದ್ದಕ್ಕೆ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್ ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಶ್ವರಪ್ಪಗೆ ಕರೆ ಮಾಡಿ ದೆಹಲಿಗೆ ಬರುವಂತೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದ  ಕೆ.ಎಸ್ ಈಶ್ವರಪ್ಪ  ಅಮಿತ್ ಶಾ ಭೇಟಿಯಾಗಲು ಅವಕಾಶ ಸಿಗದ ಹಿನ್ನೆಲೆ ವಾಪಸ್ ಆಗಿದ್ದರು.

Key words: Shimoga, Eshwarappa, MadhuBangarappa