Monday, October 26, 2026

Dasara Wishes

Sting operation DasraWishes_JK DasraWishes JK
Happy Dasara
Home Front Page ಸರಕಾರಿ ಶಿಕ್ಷಕರಿಗಾಗಿ ‘ಶಿಕ್ಷಕ ಮಿತ್ರ’ ಆ್ಯಪ್: ಆನ್’ಲೈನ್’ನಲ್ಲೇ ಸಿಗಲಿವೆ ಹಲವು ಸೇವೆ

ಸರಕಾರಿ ಶಿಕ್ಷಕರಿಗಾಗಿ ‘ಶಿಕ್ಷಕ ಮಿತ್ರ’ ಆ್ಯಪ್: ಆನ್’ಲೈನ್’ನಲ್ಲೇ ಸಿಗಲಿವೆ ಹಲವು ಸೇವೆ

ಬೆಂಗಳೂರು, ಸೆಪ್ಟೆಂಬರ್ 11, 2022 (www.justkannada.in): ಸರಕಾರಿ ಶಾಲೆ ಶಿಕ್ಷಕರಿಗೆ ರಜೆ ಮಂಜೂರಾತಿ, ಉನ್ನತ ಶಿಕ್ಷಣ, ವಿದೇಶಿ ಪ್ರಯಾಣ ಸೇರಿದಂತೆ 17 ಸೇವೆಗಳನ್ನು ಇಲಾಖೆ ಆನ್ ಲೈನ್ ಪ್ರಕ್ರಿಯೆಗೆ ಸೇರಿಸಿ ಆದೇಶ ಹೊರಡಿಸಿದೆ.

ಶಿಕ್ಷಣ ಇಲಾಖೆಯ ಈ ಆದೇಶ ಸೆ. 15 ರಿಂದ ಜಾರಿಗೆ ಬರಲಿದೆ. ಈ 17 ಸೇವೆಗಳು ಶಿಕ್ಷಕ ಮಿತ್ರ ಆಯಪ್ ಮೂಲಕ ದೊರೆಯಲಿದ್ದು, ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2.60 ಲಕ್ಷ ಶಿಕ್ಷಕರು ಇದರ ಸೌಲಭ್ಯ ಪಡೆಯಬಹುದಾಗಿದೆ.

ಯಾವ್ಯಾವ ಸೇವೆಗಳು? ಈ ಕೆಳಗಿದೆ ಮಾಹಿತಿ

ಪ್ರಭಾರ ಭತ್ಯೆ, ನಿವೇಶನ ಖರೀದಿಗೆ ಅನುಮತಿ, ಪಾಸ್ ಪೋರ್ಟ್ ನವೀಕರಣಕ್ಕೆ ನಿರಾಕ್ಷೇಪಣಾ ಪತ್ರ ನೀಡುವಿಕೆ, ವಿದೇಶ ಪ್ರವಾಸಕ್ಕೆ ಅನುಮತಿ, ಹೆಚ್ಚುವರಿ ಅರ್ಹತಾದಾಯಕ ಸೇವೆ ಸೇರ್ಪಡೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಅನುಮತಿ ನೀಡುವಿಕೆ, ಜಿಪಿಎಫ್ ಮುಂಗಡ ಪಾವತಿ, ಹಬ್ಬದ ಮುಂಗಡದ ಮಂಜೂರಾತಿ, ವಿಶೇಷ ಭತ್ಯೆ, ಅಂಗವಿಕಲರ ಭತತ್ಯೆ, ಅಧಿಕಾರಿಗಳ ತಾತ್ಕಾಲಿಕ ಪ್ರವಾಸ ಪಟ್ಟಿ ಅನುಮೋದನೆ, ಪ್ರಥಮ ವೇತನ ಪ್ರಮಾಣ ಪತ್ರ, ಉನ್ನತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲಾಖಾ ಅನುಮತಿ ಪತ್ರ ಕಾಲಮಿತಿ ಬಡ್ತಿ, ಖಾಯಂ ಪೂರ್ಣ ಅವಧಿ ಘೋಷಣೆ ಪ್ರಸ್ತಾವನೆ.