“ಕುರುಬರ ಮೀಸಲಾತಿ ಶಿಫಾರಸು ಬಾಕಿ ಉಳಿದಿದೆ” : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಮೈಸೂರು,ಜನವರಿ,17,2021(www.justkannada.in) : ನಾಯಕ, ನಾಯಕ್, ತಳವಾರ, ಪರಿವಾರ, ಬೇಡ, ವಾಲ್ಮೀಕಿ ಎಲ್ಲವೂ ಒಂದೇ. ಎಲ್ಲರಿಗೂ ಎಸ್ಟಿ ಮೀಸಲಾತಿ ಕೊಡಿ ಅಂತ ಶಿಫಾರಸು ಮಾಡಿದ್ದೆವು. ಅವರೆಲ್ಲರಿಗೂ ಮೀಸಲಾತಿ ಸಿಕ್ಕಿದೆ. ಆದರೆ, ಕುರುಬರ ಮೀಸಲಾತಿ ಶಿಫಾರಸು ಬಾಕಿ ಉಳಿದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.jk-logo-justkannada-mysoreಕಾಡು ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಇದೆ. ಆದರೆ, ಊರು ಕುರುಬರಿಗೆ ಇಲ್ಲ. ಭೌಗೋಳಿಕ ಮಿತಿ ಇಲ್ಲದ ಕಾರಣಕ್ಕಾಗಿ ಕಾಡು ಕುರುಬರು, ಊರು ಕುರುಬರು ಎಲ್ಲರೂ ಎಸ್ಟಿ ಸರ್ಟಿಫಿಕೇಟ್ ತೆಗೆದುಕೊಂಡಿದ್ದವರು. ಕೊಡಗು, ಚಾಮರಾಜನಗರ ಜಿಲ್ಲೆಯ ಕುರುಬರಿಗೆ ಮಾತ್ರ ಅಂತ ಭೌಗೋಳಿಕ ಮಿತಿ ವಿಧಿಸಲಾಯ್ತು. ಪರಿಣಾಮ ಜಾತಿ ಪ್ರಮಾಣ ಪತ್ರ ಪಡೆದು ಕೆಲಸಕ್ಕೆ ಸೇರಿದ್ದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಯ್ತು. ಅಧಿಕಾರಿಗಳ ಮೇಲೆ ಕೇಸ್ ಹಾಕಿದ್ದರು. ಆಗ ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದರು. ನಾನು ಶಾಸಕ ಆಗಿದ್ದೆ. 1986ರಲ್ಲಿ ಆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದೆವು ಎಂದು ನೆನಪಿಸಿಕೊಂಡರು.

ಸಸ್ಪೆಂಡ್, ಡಿಸ್ಮಿಸ್, ಕ್ರಿಮಿನಲ್ ಕೇಸ್ ಸೇರಿದಂತೆ ಅಧಿಕಾರಿಗಳ ಮೇಲೆ ಕೈಗೊಂಡಿದ್ದ ಕ್ರಮವನ್ನು ವಾಪಸ್ ಪಡೆಯಲಾಯ್ತು. ಎಸ್ಟಿಗೆ ಸೇರಿಸಿ ಅಂತ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೆವು. ಆಗ ಕಾಡು ಕುರುಬ, ಊರು ಕುರುಬ, ಜೇನು ಕುರುಬ, ಬೆಟ್ಟ ಕುರುಬ ಎಲ್ಲವನ್ನೂ ಶಿಫಾರಸ್ಸು ಮಾಡಿದ್ದೆವು. ಬೀದರ್, ಕಲಬುರ್ಗಿ, ಯಾದಗಿರಿ, ಕೊಡಗು ಜಿಲ್ಲೆಯ ಗೊಂಡ, ರಾಜಗೊಂಡ, ಕುರುಬ ಎಲ್ಲವೂ ಒಂದೇ ಅಂತ ಶಿಫಾರಸ್ಸು ಮಾಡಿದ್ದೇವೆ. ನರೇಂದ್ರ ಮೋದಿ ಪ್ರಧಾನಿಯಾಗಿ 7 ವರ್ಷವಾದರೂ ಎಸ್ಟಿಗೆ ಸೇರಿಸಿಲ್ಲ ಎಂದು ಹೇಳಿದರು.

“ಕುರುಬರ ಎಸ್ಟಿ ಮೀಸಲಾತಿ ಹೋರಾಟ ಆರ್‌ಎಸ್‌ಎಸ್ ದುಡ್ಡು ಕೊಡುತ್ತಿದೆ”

ಕುರುಬರ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಕಾಗಿನೆಲೆ ಶ್ರೀ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಪಾದಯಾತ್ರೆಗೆ ಆರ್‌ಎಸ್‌ಎಸ್ ಎನ್ನುವವರು ದುಡ್ಡು ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶ ಮಾಡಿದ್ದೇವೆ. ವರದಿ ಸಿದ್ಧಪಡಿಸಲು 40 ಲಕ್ಷ ರೂ. ಅನುದಾನವನ್ನೂ ಕೊಟ್ಟಿದ್ದೇನೆ. ಈ ನಡುವೆ ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುವ ಸಲುವಾಗಿ ಒಂದು ಗುಂಪು ಹುಟ್ಟಿಕೊಂಡಿದೆ ಎಂದು ಬೇಸರವ್ಯಕ್ತಪಡಿಸಿದರು.

Shepherd,reservation,pending,recommendation,Opposition,leader,Siddaramaiahkey words : Shepherd-reservation-pending-recommendation-Opposition-leader-Siddaramaiah