“ಗೊಲ್ಲ, ಕ್ಷೌರಿಕ, ಮಡಿವಾಳ ಸಮುದಾಯಗಳಿಗೂ ಎಸ್ಟಿ ಮೀಸಲಾತಿ ಸಿಗಬೇಕು” : ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ಜನವರಿ,17,2021(www.justkannada.in) : ಎಲ್ಲರೂ ಗುಂಪು ಸೇರಿಕೊಂಡು ಈಶ್ವರಪ್ಪನನ್ನು ಹಿಡಿದುಕೊಂಡಿದ್ದಾರೆ. ಕುರುಬ ಸಮುದಾಯ ಮಾತ್ರವಲ್ಲ, ಟ್ರೈಬಲ್ ಕ್ಯಾರೆಕ್ಟರ್ ಇರುವ ಎಲ್ಲ ಸಮುದಾಯಗಳಿಗೂ ಎಸ್ಟಿ ಮೀಸಲಾತಿ ಸಿಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.jk-logo-justkannada-mysoreಗೊಲ್ಲ, ಕ್ಷೌರಿಕ, ಮಡಿವಾಳ ಸಮುದಾಯಗಳಿಗೂ ಎಸ್ಟಿ ಮೀಸಲಾತಿ ಸಿಗಬೇಕು. ಕುಲಶಾಸ್ತ್ರ ಅಧ್ಯಯನ ಆಧರಿಸಿ ಮೀಸಲಾತಿಯನ್ನು ಕೇಂದ್ರ ಸರ್ಕಾರ ಆದೇಶ ಮಾಡಬೇಕು ಅದನ್ನು ಬಿಟ್ಟು ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ. ರಿಪೋರ್ಟ್ ಬರದೇ ಪಾದಯಾತ್ರೆ ಮಾಡಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.Golla,Barber,Madiwala,Communities,Must Get,ST Reservation,Former CM,Siddaramaiahಪರ್ಮಲ್ ಮಿನಿಸ್ಟ್ರು ಈಶರಪ್ಪ ಇದ್ದಾರಲ್ಲ. ಅವರೇ ಶಿಫಾರಸು ಮಾಡಿಸಲಿ. ಸುಮ್ಮನೆ ಸ್ವಾಮೀಜಿಗಳನ್ನು ಯಾಕೆ ನಡೆಸಿ ತೊಂದರೆ ಕೊಡುತ್ತೀರಿ. ಪಾದಯಾತ್ರೆ ನನ್ನ ವಿರುದ್ಧ ಕುರುಬರನ್ನು ಎತ್ತಿಕಟ್ಟುವ ಹುನ್ನಾರವಾಗಿದೆ. ಆ ಹೋರಾಟದ ಹಿಂದೆ ಆರ್‌ಎಸ್‌ಎಸ್ ಇದೆ. ಅವರು ಪಾದಯಾತ್ರೆಗೂ ದುಡ್ಡು ಕೊಡುತ್ತಿದ್ದಾರೆ ಎಂದು ಗಭೀರ ಆರೋಪ ಮಾಡಿದರು.

key words : Golla-Barber-Madiwala-Communities-Must Get-ST Reservation-Former CM- Siddaramaiah