Monday, August 17, 2026

BDA Apartments

Home Front Page ಶಂಕರ್ ಪಾಟೀಲ್ ಮುನೇಕಕೊಪ್ಪ ಬಿಜೆಪಿ ಬಿಟ್ಟು  ಹೋಗಲ್ಲ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಶಂಕರ್ ಪಾಟೀಲ್ ಮುನೇಕಕೊಪ್ಪ ಬಿಜೆಪಿ ಬಿಟ್ಟು  ಹೋಗಲ್ಲ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ, ಆಗಸ್ಟ್,.28,2023(www.justkannada.in):  ಮಾಜಿ ಸಚಿವ ಶಂಕರ ಪಾಟೀಲ್​ ಮುನೇನಕೊಪ್ಪ ಅವರು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ  ಸ್ಪಷ್ಟನೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು  ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಾನು ಶಂಕರ ಪಾಟೀಲ್ ಮುನೇನಕೊಪ್ಪ ಜೊತೆ ಮಾತನಾಡಿದ್ದೇನೆ. ನನಗಿರುವ‌ ಮಾಹಿತಿ ಪ್ರಕಾರ ಅವರು ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ ಎಂದರು.

ಅಧಿಕಾರಕ್ಕಾಗಿ ಕೆಲವರು ಹೋಗುತ್ತಾರೆ, ಇದು ದೌರ್ಭಾಗ್ಯ. ಯಾರು ಪಕ್ಷ ನಿಷ್ಠೆಯಿಂದ ಇರುತ್ತಾರೋ ಅಂತವರಿಗೆ ಬಿಜೆಪಿ ಅವಕಾಶ ಕೊಟ್ಟಿದೆ. ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನಿಸಬಹುದು, ಆದರೆ ವಿಚಾರಕ್ಕೆ ಬದ್ದರಾಗಿರುವ ಎಲ್ಲರೂ ನಮ್ಮ ಪಕ್ಷದಲ್ಲಿ ಇರುತ್ತಾರೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

 

Key words: Shankar Patil Munekakoppa -not –left- BJP – Union Minister- Prahlad Joshi.