ಉನ್ನತ ವ್ಯಾಸಂಗಕ್ಕಾಗಿ ನ್ಯೂಯಾರ್ಕ್’ಗೆ ತೆರಳಿದ ಶಾರುಖ್ ಪುತ್ರಿ: ಮತ್ತೆ ಫೋಟೋ ವೈರಲ್

ಬೆಂಗಳೂರು, ಸೆಪ್ಟೆಂಬರ್ 07, 2019 (www.justkannada.in): ಶಾರುಖ್​ ಪುತ್ರಿ ಸುಹಾನಾ ಸದ್ಯ ಪದವಿ ಮುಗಿಸಿ, ಈಗ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ.

ನ್ಯೂಯಾರ್ಕ್​ನ ವಿಶ್ವವಿದ್ಯಾಲಯಕ್ಕೆ ಈಗಷ್ಟೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ಫೋಟೋಗಳಿಂದಲೇ ಸದ್ದು ಮಾಡುವ ಸುಹಾನಾ, ಈಗ ಮತ್ತೆ ಇದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ಸುಹಾನಾ ಖಾನ್​, ಹಿಂದೆಯೂ ಸಾಕಷ್ಟು ಸಲ ಸುಹಾನಾ ಕೇವಲ ತಮ್ಮ ಫೋಟೋಗಳಿಂದಲೇ ಸದ್ದು ಮಾಡಿದ್ದರು.

ಈಗಲೂ ಸಹ ಅವರು ನ್ಯೂಯಾರ್ಕ್​ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿದ್ದು, ಅಲ್ಲಿನ ಕ್ಯಾಂಪಸ್​ನಲ್ಲಿ ಸುಹಾನಾ ಇರುವ ಒಂದು ಚಿತ್ರ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದ್ದು, ಅದು ಈಗ ವೈರಲ್​ ಆಗುತ್ತಿದೆ.