ಲೈಂಗಿಕ ದೌರ್ಜನ್ಯ: ಆಸ್ಟ್ರೇಲಿಯಾದಲ್ಲಿ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಬಂಧನ

ಬೆಂಗಳೂರು, ನವೆಂಬರ್ 06, 2022 (www.justkannada.in): ಲೈಂಗಿಕ ದೌರ್ಜನ್ಯದ ಆರೋಪದಡಿ ಶ್ರೀಲಂಕಾದ ಆರಂಭಿಕ ಬ್ಯಾಟರ್ ದನುಷ್ಕಾ ಗುಣತಿಲಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಗುಣತಿಲಕ ಅವರನ್ನು ಇಂದು ಮುಂಜಾನೆ ಸಿಡ್ನಿಯ ಸೆಂಟ್ರಲ್ ತಂಡದ ಹೋಟೆಲ್‌ನಿಂದ ಬಂಧಿಸಲಾಯಿತು.

29 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರು.

ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನ ಮೂಲಕ ಹಲವಾರು ದಿನಗಳವರೆಗೆ ವ್ಯಕ್ತಿಯೊಬ್ಬರ ಜೊತೆ ಮಾತುಕತೆ ನಡೆಸಿದ್ದ ಮಹಿಳೆ ಬಳಿಕ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ನವೆಂಬರ್ 2ರ ಸಂಜೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ಸದ್ಯ ಚಾಲ್ತಿಯಲ್ಲಿರುವ ತನಿಖೆಗಳ ಭಾಗವಾಗಿ ನಿನ್ನೆ ರೋಸ್ ಬೇನಲ್ಲಿರುವ ವಿಳಾಸದಲ್ಲಿ ವಿಶೇಷ ಪೋಲೀಸ್ ಪಡೆ ಸಿಸಿಟಿವಿ ದೃಶ್ಯ ಪರೀಕ್ಷೆಯನ್ನು ನಡೆಸಿತು. ಈ ಸಂದರ್ಭದಲ್ಲಿ ಗುಣತಿಲಕ ಅವರು ಕಂಡುಬಂದಿದ್ದಾರೆ ಎನ್ನಲಾಗಿದೆ.