ಟೀಮ್ ಇಂಡಿಯಾ-ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಕ್ಷಣಗಣನೆ ಶುರು!

ಬೆಂಗಳೂರು, ನವೆಂಬರ್ 06, 2022 (www.justkannada.in): ಟೀಮ್‌ ಇಂಡಿಯಾ ಇಂದು ಜಿಂಬಾಬ್ವೆ ವಿರುದ್ಧ ಸೆಣೆಸಾಡಲು ಸಜ್ಜಾಗಿದೆ.

ಈ ಪಂದ್ಯದಲ್ಲಿ ಗೆದ್ದು ಟಿ20 ವಿಶ್ವ ಕಪ್‌ ಟೂರ್ನಿಯ ಸೆಮಿಫೈನಲ್‌ಗೆ ಅಧಿಕೃತವಾಗಿ ಅರ್ಹತೆ ಪಡೆಯಲು ರೋಹಿತ್‌ ಶರ್ಮಾ ಪಡೆ ಸಜ್ಜಾಗಿದೆ.

ಭಾರತ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ಮೂರು ಪಂದ್ಯದಲ್ಲಿ ಗೆಲುವು ದಾಖಲಿಸಿ ಆರು ಅಂಕದೊಂದಿಗೆ ಸದ್ಯ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಆದರೂ ಭಾರತದ ಸೆಮಿಫೈನಲ್‌ ಟಿಕೆಟ್‌ ಇನ್ನೂ ಖಾತ್ರಿಯಾಗಿಲ್ಲ. ಇಂದು ಗೆದ್ದರೆ ಪಟ್ಟಿಯಲ್ಲಿ ಅಗ್ರ ಸ್ಥಾನದೊಂದಿಗೆ ಸೆಮಿಫೈನಲ್ ಗೆ ಏರಲಿದೆ.

ಜಿಂಬಾಬ್ವೆ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ.ಹೀಗಾಗಿ ಟೀಂ ಇಂಡಿಯಾ ಎಚ್ಚರಿಕೆಯಿಂದ ಆಟವಾಡಬೇಕಿದೆ.