ಐಸಿಸಿ ಟಿ20 ವಿಶ್ವಕಪ್: ನೆದರ್’ಲೆಂಡ್ಸ್ ವಿರುದ್ಧ ಸೋತ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಆಸೆ ಭಗ್ನ

ಬೆಂಗಳೂರು, ನವೆಂಬರ್ 06, 2022 (www.justkannada.in): ಅಡಿಲೆಡ್​ನ ಓವಲ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್​ಲೆಂಡ್ಸ್ 13 ರನ್​ಗಳ ಜಯ ಸಾಧಿಸಿದೆ.

ಆಫ್ರಿಕ ಸೋತ ಪರಿಣಾಮ ಟೀಮ್ ಇಂಡಿಯಾ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದೆ.  ಈ ಮೂಲಕ ಆಫ್ರಿಕಾನ್ನರ ಸೆಮಿ ಫೈನಲ್ ಹಾದಿ ಅಸಾಧ್ಯವಾಗಿದೆ.

ಐಸಿಸಿ ಟಿ20 ವಿಶ್ವಕಪ್ ಗ್ರೂಪ್ 2ರ ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿದೆ. ಅಡಿಲೆಡ್​ನ ಓವಲ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ನೆದರ್​ಲೆಂಡ್ಸ್ 13 ರನ್​ಗಳ ಜಯ ಸಾಧಿಸಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್​ಗೆ ಇಳಿದ ನೆದರ್​ಲೆಂಡ್ಸ್ ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿ  20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತು. ಆಫ್ರಿಕಾ 20 ಓವರ್​ಗೆ 8 ವಿಕೆಟ್ ನಷ್ಟಕ್ಕೆ 145 ರನ್​ಗಳನ್ನಷ್ಟೆ ಕಲೆಹಾಕಿ ಸೋಲೋಪ್ಪಿಕೊಂಡಿತು.