Sunday, September 20, 2026

BDA Apartments

ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ದಿನಾಂಕ ನಿಗದಿ… BDA JK_Adv BDA Adv
Home Front Page   ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ದಿನಾಂಕ ನಿಗದಿ…

  ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ದಿನಾಂಕ ನಿಗದಿ…

ಬೆಂಗಳೂರು,ಜೂ,24,2019(www.justkannada.in): ಸಮ್ಮಿಶ್ರ ಸರ್ಕಾರದ ಕಾರ್ಯಕ್ರಮ ಸಿಎಂ ಗ್ರಾಮವಾಸ್ತವ್ಯಕ್ಕೆ ದಿನಾಂಕ ನಿಗದಿಯಾಗಿದೆ.

ಜೂನ್ 26 ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರಿಗುಡ್ಡ ಗ್ರಾಮದಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಹೂಡಲಿದ್ದಾರೆ.  ಕರಿಗುಡ್ಡದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಲಿರುವ ಸಿಎಂ ಹೆಚ್.ಡಿಕೆ ನಂತರ ಜೂನ್ 27 ರಂದು  ಬೀದರ್ ಜಿಲ್ಲೆಯ ಬಸವಕಲ್ಯಾಣದ ಉಜಿಳಾಂಬ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಗ್ರಾಮವಾಸ್ತವ್ಯದ ವೇಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜನರ ಸಮಸ್ಯೆಗಳನ್ನ ಆಲಿಸಲಿದ್ದಾರೆ. ಜೂನ್ 25 ರ ಸಂಜೆ ಉದ್ಯಾನ್  ಪ್ರೆಸ್ ಮೂಲಕ ಪ್ರಯಾಣ ಬೆಳೆಸಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಯಚೂರಿಗೆ ತೆರಳಲಿದ್ದಾರೆ. ಇತ್ತೀಚೆಗೆ ಮಳೆಯಿಂದಾಗಿ ಕಲಬುರಗಿ ಜಿಲ್ಲೆ ಹೆರೂರು ಗ್ರಾಮದಲ್ಲಿ ಗ್ರಾಮವಾಸ್ತವ್ಯ ರದ್ಧಾಗಿತ್ತು. ಜುಲೈ ಮೊದಲ ವಾರ ಗ್ರಾಮವಾಸ್ತವ್ಯಕ್ಕೆ ಚಿಂತನೆ ನಡೆದಿತ್ತು.

Key words: Set -date -CM HD Kumaraswamy -Gramvastavya.