Tuesday, August 4, 2026

BDA Apartments

Home Front Page ಹೈಕಮಾಂಡ್ ಒಪ್ಪಿದ್ರೆ ಮುಂದೆಯೂ ನಾನೇ ಬಜೆಟ್ ಮಂಡಿಸುತ್ತೇನೆ- ಸಿಎಂ ಸಿದ್ದರಾಮಯ್ಯ

ಹೈಕಮಾಂಡ್ ಒಪ್ಪಿದ್ರೆ ಮುಂದೆಯೂ ನಾನೇ ಬಜೆಟ್ ಮಂಡಿಸುತ್ತೇನೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,25,2026 (www.justkannada.in):  ಹೈಕಮಾಂಡ್ ಒಪ್ಪಿದರೇ ನಾನೇ ಬಜೆಟ್ ಮಂಡಿಸುತ್ತೇನೆ ಎಂದು ವಿಧಾನಸಭೆ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ  ಹೇಳಿಕೆ ನೀಡಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದರು. ಈ ವೇಳೆ ಮತ್ತೆ ಸಿಎಂ ಸಿದ್ದರಾಮಯ್ಯನವರ ಕಾಲೆಳೆದ ವಿಪಕ್ಷ ನಾಯಕ ಆರ್.ಅಶೋಕ್, ಮುಂಧಿನ ಬಜೆಟ್ ನೀವೇ ಮಂಡಿಸಬೇಕು ನಿಧಾನವಾಗಿ ಓದಿ. ಎರಡು ಬಜೆಟ್ ಮಂಡಿಸಬೇಕು ಎಂದರು.

ಈ ವೇಳೆ ಆರ್.ಅಶೋಕ್ ಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ, ಹೌದು ನಾವೇ ಬಜೆಟ್ ಮಂಡಿಸುತ್ತೇವೆ. 2028ರವರೆಗೂ ನಮ್ಮ ಸರ್ಕಾರ ಮುಂದೆಯೂ ನಮ್ಮದೇ ಸರ್ಕಾರ. ಹೈಕಮಾಂಡ್ ಒಪ್ಪಿದರೆ  ನಾನೇ ಬಜೆಟ್ ಮಂಡಿಸುತ್ತೇನೆ ಎಂದು ಹೇಳುವ ಮೂಲಕ ಮತ್ತೆ ಹೈಕಮಾಂಡ್ ಕಡೆ ಬೊಟ್ಟು ಮಾಡಿದರು.

Key words: budget Session, CM, Siddaramaiah