Saturday, August 1, 2026

BDA Apartments

Home Front Page ವಿಧಾನಸಭೆಯಲ್ಲಿ ಸಿಎಂ ಬಿಎಸ್ ವೈ ನೂತನ ಸಚಿವರ ಪರಿಚಯ ಮಾಡಿಕೊಡಲು ಮುಂದಾದ ವೇಳೆ...

ವಿಧಾನಸಭೆಯಲ್ಲಿ ಸಿಎಂ ಬಿಎಸ್ ವೈ ನೂತನ ಸಚಿವರ ಪರಿಚಯ ಮಾಡಿಕೊಡಲು ಮುಂದಾದ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದ್ದು ಹೀಗೆ……

ಬೆಂಗಳೂರು,ಫೆ,18,2020(www.justkannada.in): ಇತ್ತೀಚೆಗಷ್ಟೆ ಬಿಜೆಪಿ ಸರ್ಕಾರದ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರನ್ನ ಸಿಎಂ ಬಿಎಸ್ ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ ಪರಿಚಯ ಮಾಡಿಕೊಟ್ಟರು.

ವಿಧಾನಸಭೆ ಕಲಾಪದಲ್ಲಿ ನೂತನ ಸಚಿವರ ಪರಿಚಯಕ್ಕೆ ಮುಂದಾದ ಸಿಎಂ ಬಿಎಸ್ ಯಡಿಯೂರಪ್ಪ ಮೊದಲು ಸಚಿವ ರಮೇಶ್ ಜಾರಕಿಹೊಳಿ ಪರಿಚಯ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಸದನದಲ್ಲಿ ಸಚಿವರೇ ಇಲ್ಲದಿರುವಾಗ ಪರಿಚಯ ಯಾಕೆ..? ಯಾರನ್ನ ಪರಿಚಯ ಮಾಡಿಕೊಡುತ್ತೀರಿ ಎಂದು ಪ್ರಶ್ನಿಸಿದರು.

ಹಾಗೆಯೇ ಮುಂದುವರೆದು ಪರಿಚಯ ಮಾಡಿಕೊಡಬೇಕು ಅಂತೇನಿಲ್ಲ. ನಮ್ಮಲ್ಲಿದ್ದವರೇ ಅಲ್ಲಿಗೆ ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದರು. ಈ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ  ಕೆಲ ಸಚಿವರು ವಿಧಾನ ಪರಿಷತ್ ಗೆ ಹೋಗಿದ್ದಾರೆ ಎಂದು ಹೇಳಿ ನೂತನ ಸಚಿವ ಹೆಸರನ್ನ ಓದಿ ಪರಿಚಯ ಮಾಡಿಕೊಟ್ಟರು.

Key words:  session-cm bs yeddyurappa- news minister- Objection-former CM- siddaramaiah