Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಮಾಜಿ ಸಿಎಂ ಸಿದ್ಧರಾಮಯ್ಯರನ್ನ ಹೊಗಳಿದ ಸಂಸದ ಪ್ರತಾಪ್ ಸಿಂಹ ಅವರ ಕಾಲೆಳೆದ ಹೆಚ್.ಸಿ ಮಹದೇವಪ್ಪ…

ಮಾಜಿ ಸಿಎಂ ಸಿದ್ಧರಾಮಯ್ಯರನ್ನ ಹೊಗಳಿದ ಸಂಸದ ಪ್ರತಾಪ್ ಸಿಂಹ ಅವರ ಕಾಲೆಳೆದ ಹೆಚ್.ಸಿ ಮಹದೇವಪ್ಪ…

ಮೈಸೂರು,ಫೆ,18,2020(www.justkannada.in): ಮೈಸೂರಿನ ಜಯದೇವ ಆಸ್ಪತ್ರೆ ನಿರ್ಮಾಣವಾದ ವಿಚಾರ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯರನ್ನ ಮೈಸೂರು –ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೊಗಳಿ ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ.

ಈ ಬಗ್ಗೆ ಪೋಸ್ಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ಆತ್ಮೀಯರಾದ ಅಣ್ಣಯ್ಯ ನಾಯಕರು ಲಘು ಹೃದಯಘಾತಕ್ಕೊಳಗಾಗಿ ಮೈಸೂರಿನ ಜಯದೇವ ಆಸ್ಪತ್ರೆಗೆ ಸೇರಿದ್ದು ಅವರನ್ನ ನೋಡಲು ಹೋಗಿದ್ದೆ. ಕಟ್ಟಡ ವ್ಯವಸ್ಥೆ ಅದ್ಬುತವಾಗಿದೆ. 168 ಕೋಟಿ ಕೊಟ್ಟು ಅತ್ಯಾಧುನಿಕ ಕಟ್ಟಡ ನಿರ್ಮಾಣಕ್ಕೆ ಕಾರಣರಾದ  ಮಾಜಿ ಸಿಎಂ ಸಿದ್ಧರಾಮಯ್ಯ ಸಾಹೇಬ್ರಿಗೆ ಉತ್ತಮ ಸೇವೆ ನೀಡುತ್ತಿರುವ ಡಾ. ಮಂಜುನಾಥ್ ಗೆ ಧನ್ಯವಾದಗಳು ಎಂದು ತಿಳಿಸಿದ್ದರು.

ಈ ನಡುವೆ ಸಿದ್ಧರಾಮಯ್ಯರನ್ನ ಹೊಗಳಿ  ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ದ ಮಾಜಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಫೇಸ್‌ಬುಕ್‌ನಲ್ಲೇ ಗುಡುಗಿದ್ದಾರೆ. ಪ್ರತಾಪ್ ಸಿಂಹ ಪೋಸ್ಟ್ ಗೆ  ಮಾಜಿ ಸಚಿವ ಮಹದೇವಪ್ಪ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಗರು ಸುಳ್ಳು ಪ್ರಚಾರ ಮಾಡಿದ್ರು.ಶವ ರಾಜಕೀಯ ಮಾಡಿ ಅಪಪ್ರಚಾರ ಮಾಡಿದ್ರು. ಈಗ ಸಿದ್ದರಾಮಯ್ಯರ ಸಾಧನೆಯನ್ನ  ಶ್ಲಾಘಿಸುತ್ತಾರೆ. ಇದು ಬಿಜೆಪಿಗರ ಇಬ್ಬಂದಿ ನೀತಿ. ಈಗ ಸಿದ್ದರಾಮಯ್ಯರನ್ನ ಹೊಗಳಿರುವ ಈ ವ್ಯಕ್ತಿ ಮುಂದಿನ ಚುನಾವಣೆಗೆ ಇನ್ನೊಂದು ವರಸೆ ತೆಗೆಯಬಹುದು. ಆದ್ರೆ ಜನರ ಪರವಾಗಿ ಅಭಿವೃದ್ಧಿ ಕೆಲಸ ಮಾಡೋದೆ ನಮ್ಮ‌ ಕರ್ತವ್ಯ ಎಂದು ಹೆಚ್.ಸಿ ಮಹದೇವಪ್ಪ ಸಂಸದ ಪ್ರತಾಪ್ ಸಿಂಹ ಅವರ ಕಾಲೇಳೆದಿದ್ದಾರೆ.

Key words: MP – Pratap Simha- praised- former CM- Siddaramaiah- HC Mahadevappa