ಹೊಸಪೇಟೆ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಮಠಾಧೀಶರ ನಿಯೋಗದಿಂದ ಸಿಎಂ ಬಿಎಸ್ ವೈಗೆ ಮನವಿ…

ಬೆಂಗಳೂರು,ಸೆ,,18,2019(www.justkannada.in): ಹೊಸಪೇಟೆಯನ್ನ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಮಠಾಧೀಶರ ನಿಯೋಗ ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿತು.

ಉಜ್ಜೈನಿ ಪೀಠದ ಜಗದ್ಗುರುಗಳು, ಕೊಟ್ಟೂರು ಮಠದ ಸಂಗನಬಸವ ಶ್ರೀಗಳ ನೇತೃತ್ವದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಹೊಸಪೇಟೆಯನ್ನ ಪ್ರತ್ಯೇಕ ಜಿಲ್ಲೆ ಮಾಡುವಂತೆ ಮನವಿ ಮಾಡಿದರು. ಶ್ರೀಗಳಿಗೆ ಅನರ್ಹ ಶಾಸಕ ಆನಂದ್ ಸಿಂಗ್, ಕಂಪ್ಲಿ ಶಾಸಕ ಗಣೇಶ್ ಸಾಥ್ ನೀಡಿದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಶಾಸಕ ಕಂಪ್ಲಿ ಗಣೇಶ್, ಹೊಸಪೇಟೆ ಪ್ರತ್ಯೇಕ ಜಿಲ್ಲೆಗೆ ಮನವಿ ಮಾಡಿದ್ದೇವೆ. ಇಂದು ಸಂಜೆ ವೇಳೆಗೆ  ಹೊಸಪೇಟೆ ಜಿಲ್ಲೆಯಾಗುವ ವಿಶ್ವಾಸವಿದೆ. ಈ ಬಗ್ಗೆ ಚರ್ಚಿಸಿ ಸಂಜೆಯೊಳಗೆ ಘೋಷಣೆ ಮಾಡುತ್ತೇನೆ  ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ.  ಹೊಸಪೇಟೆಯನ್ನ ಜಿಲ್ಲೆಯನ್ನಾಗಿ ಮಾಡಲು ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ. ಹೀಗಾಘಿ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು.

Key words: separate -district – Hospet- appeals -delegation – CM BS yeddyurappa