ಸಿನಿಮಾ ಬಿಡುಗಡೆ ವೇಳೆ ಫ್ಲೆಕ್ಸ್, ಬಂಟಿಂಗ್ಸ್ ಕಟ್ಟಬೇಡ: ಅಭಿಮಾನಿಗಳಿಗೆ ಸೂರ್ಯ, ವಿಜಯ್ ಮನವಿ

ಬೆಂಗಳೂರು, ಸೆಪ್ಟೆಂಬರ್ 18, 2019 (www.justkannada.in): ನಟರಾದ ವಿಜಯ್ ಮತ್ತು ಸೂರ್ಯ ತಮ್ಮ ಅಭಿಮಾನಿಗಳಿಗೊಂದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಚೆನ್ನೈನ ತೊರೈಪಾಕ್ಕಂ-ಪಲ್ಲಾವರಂ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶುಭಶ್ರಿ ಅವರ ಮೇಲೆ ಹೋರ್ಡಿಂಗ್ ಬಿದ್ದು ಸಾವನ್ನಪ್ಪಿದ್ದರು. ಹೀಗಾಗಿ ಹಿನ್ನೆಲೆಯಲ್ಲಿ ವಿಜಯ್ ಮತ್ತು ಸೂರ್ಯ ಈ ಮನವಿ ಮಾಡಿದ್ದಾರೆ.

ಈ ವಾರ ಬಿಡುಗಡೆಯಾಗಲಿರುವ ಬಿಜಿಲ್ ಚಿತ್ರದ ಹಾಡುಗಳಿಗೆ ಶುಭ ಕೋರುವ ಅಥವಾ ಅದಕ್ಕೆ ಸಂಬಂಧಿಸಿದ ಬ್ಯಾನರ್ ಅಥವಾ ಹೋರ್ಡಿಂಗ್ ಹಾಕಬೇಡಿ ಎಂದು ವಿಜಯ್, ಎಲ್ಲಾ ಜಿಲ್ಲಾ ಅಭಿಮಾನಿಗಳ ಸಂಘಗಳಿಗೆ ಸೂಚನೆ ನೀಡಿದ್ದಾರೆ.

ವಿಜಯ್ ಅವರು ಮಾಡಿಕೊಂಡ ಮನವಿಯ ಬೆನ್ನಲ್ಲೇ ಸೂರ್ಯ ಅವರೂ ಸಹ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.