ಸಾಂಸ್ಕೃತಿಕ ನಗರಿಯಲ್ಲಿ ಹಿರಿಯ‌ ಸ್ವಾಮೀಜಿ ಭೀಕರ ಹತ್ಯೆ.

Senior seer killed in cultural city Mysore.

 

Shivananda Swamiji of Annadaneshwara Mutt in Siddarthanagar, Mysore was stabbed to death in his room. Ravi (60), who was the security guard and assistant of the Swamiji, is alleged to have committed the crime

 

ಮೈಸೂರು, ಜೂ.10,2024: (www.justkannada.in news) ಸಿದ್ದಾರ್ಥನಗರದ  ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ ಅವರನ್ನು ಮಠದ ಅವರ ಕೊಠಡಿಯಲ್ಲೇ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ.

ಸ್ವಾಮೀಜಿಯ ಭದ್ರತಾ ಸಿಬ್ಬಂದಿ ಕಂ ಸಹಾಯಕನಾಗಿದ್ದ ರವಿ (60) ಎಂಬಾತನಿಂದ ಕೃತ್ಯ ಎಂಬ ಆರೋಪ ಕೇಳಿ ಬಂದಿದೆ.

ಸ್ಥಳಕ್ಕೆ  ನಜರ್‌ಬಾದ್ ಪೊಲೀಸರು ಭೇಟಿ.  ಪರಿಶೀಲನೆ ನಡೆಸಿ ಅಲ್ಲಿದ್ದ ಸಿಬ್ಬಂದಿ ಮತ್ತು ಮಠದಲ್ಲಿದ್ದವರಿಂದ ಮಾಹಿತಿ ಕಲೆಹಾಕಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೊಲೆಯಾದ ಸ್ವಾಮೀಜಿ ಅತ್ಯಂತ ಹಿರಿಯರು. ಈ ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎಂದು ಗೊತ್ತಿಲ್ಲ ಆರೋಪಿಯನ್ನು ಬಂಧಿಸಿ ಬಳಿಕ ಸತ್ಯಾಂಶ ಹೊರ ಬೀಳಲಿದೆ.

ಈ ಹಿಂದೆ …

ಮೈಸೂರಿನ ಅನ್ನದಾನೇಶ್ವರ ಮಠದ ಭಕ್ತರಾದ ಹನುಮಂತ ಪಾಟೀಲ ಹಾಗೂ ಅವರ ಮಡದಿ ಈ ಹಿಂದೆ ಒಮ್ಮೆ ಇದೇ ಸ್ವಾಮೀಜಿ ವಿರುದ್ಧ ದೂರು ನೀಡಿದ್ದರು.

ಬೆಳಗಾವಿಯಿಂದ ಮೈಸೂರಿಗೆ ಬಂದು ನೆಲೆಸಿದ್ದ ಈ ದಂಪತಿ 2011 ರಲ್ಲಿ ಸ್ವಾಮೀಜಿ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು.

ಪಾಟೀಲ್ ಸೆಕ್ಯೂರಿಟಿ ಗಾರ್ಡ್ ಆಗಿದ್ದರೆ ಅವರ ಪತ್ನಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ದಂಪತಿ ಅನ್ನದಾನೇಶ್ವರ ಮಠದ ಶ್ರೀ ಮಹಾಶಿವಲಿಂಗ ಸ್ವಾಮೀಜಿ ಅವರ ಸೇವೆಯಲ್ಲಿ ತೊಡಗಿದ್ದ ವೇಳೆ  ಮಠದ ಸ್ವಾಮೀಜಿಯು ದಂಪತಿಯಿಂದ ಒಂದೂವರೆ ಲಕ್ಷ ರೂ. ಹಣ ಪಡೆದಿದ್ದರು. ಇದಕ್ಕೆ ಬದಲಿಯಾಗಿ ಮಠದ ಆವರಣದಲ್ಲಿ ಜಾಗ ಕಲ್ಪಿಸುವ ಮಾತು ನೀಡಿ, ಅಲ್ಲಿ ನಿರ್ಮಾಣವಾಗುತ್ತಿದ್ದ ಕಾಂಪ್ಲೆಕ್ಸ್ ನ ಉಸ್ತುವಾರಿಯನ್ನು ಪಾಟೀಲ್ ಗೇ ನೀಡುವುದಾಗಿ ಸ್ವಾಮೀಜಿ ಮಾತು ನೀಡಿದ್ದರು. ಆದರೆ ಇದ್ಯಾವುದು ನಡೆಯದೆ ಹೋದಾಗ, ಪಾಟೀಲ್ ದಂಪತಿ ಹಣ ನೀಡುವಂತೆ ಒತ್ತಾಯಿಸಿದರು.

ಈ ರೀತಿ ಹಣ ಕೇಳಲು ಹೋದಾಗಲೇ ಪಾಟೀಲರ ಮಡದಿಯ ಕೈ ಹಿಡಿದು ಎಳೆದಾಡಿದ ಸ್ವಾಮೀಜಿ ಸೀರೆಗೂ ಕೈ ಹಾಕಿದ ಎಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಆರೋಪಿಸಲಾಗಿತ್ತು.

key words:  Senior seer, killed ,in cultural city, Mysore.

SUMMARY:

Shivananda Swamiji of Annadaneshwara Mutt in Siddarthanagar, Mysore was stabbed to death in his room. Ravi (60), who was the security guard and assistant of the Swamiji, is alleged to have committed the crime.

Nazarbad police visited the spot.  Further action was taken after collecting information from the staff present there and those present at the mutt.