ಕಸದ ಮೇಲೂ ತೆರಿಗೆ ಹಾಕ್ತಿದ್ದಾರೆ ಅಂದರೇ ಸರ್ಕಾರ ದಿವಾಳಿಯಾಗಿದೆ- ಆರ್.ಅಶೋಕ್ ವಾಗ್ದಾಳಿ.

ಬೆಂಗಳೂರು,ಜೂನ್,10,2024 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ಕಸದ ಮೇಲೂ ತೆರಿಗೆ ಹಾಕಲು ಮುಂದಾಗಿದೆ. ಇದನ್ನ ನೋಡಿದರೇ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಪಾಪರ್ ಆಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಈಗಾಗಲೇ ಹಾಲು, ಲಿಕ್ಕರ್, ವಿದ್ಯುತ್, ಮನೆ ತೆರಿಗೆ ಹೆಚ್ಚಳವಾಗಿದೆ. ಈಗ ಘನ ತ್ಯಾಜ್ಯಕ್ಕೆ ತೆರಿಗೆ ಹಾಕಲು ಸರ್ಕಾರ ಮುಂದಾಗಿದೆ. ಕಸದ ಮೇಲೆ ತೆರಿಗೆ ವಿಧಿಸುವುದನ್ನು ಬಿಜೆಪಿ ವಿರೋಧಿಸುತ್ತದೆ. ಕಸದ ಮೇಲೆಯೂ ಸರ್ಕಾರ ತೆರಿಗೆ ವಿಧಿಸಿದರೆ ಬಿಜೆಪಿ ಹೋರಾಟ ಮಾಡುತ್ತದೆ. ಕಸದ ಮೇಲು ತೆರಿಗೆ ಹಾಕಿದ್ದಾರೆಂದರೆ ಸರ್ಕಾರ ಪಾಪರ್ ಆಗಿದೆ. ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನ ಮಾಡಿಲ್ಲ ಎಂದು ಕಿಡಿಕಾರಿದರು.

ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಸರ್ಕಾರ ಪತನ ಬಗ್ಗೆ ಕಾದು ನೋಡಿ.  ಕಾಂಗ್ರೆಸ್  ಶಾಸಕರೇ ಭಿನ್ನಮತಿಯ ಚಟುವಟಿಕೆ ಆರಂಭಿಸುತ್ತಾರೆ. ನಾವು ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ನಡೆಯುತ್ತೇವೆ. ನಾವು ಕಾದು ನೋಡುತ್ತೇವೆ ಎಂದು ತಿಳಿಸಿದರು.

Key words:  tax, garbage, government, R. Ashok