ದೊಡ್ಮನೆ ಹುಡುಗ ಯುವ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಕೋರಿ ನಟ ಯುವರಾಜ್ ಕುಮಾರ್ ಅರ್ಜಿ

ಬೆಂಗಳೂರು,ಜೂನ್,10,2024 (www.justkannada.in): ಡಾ. ರಾಜ್‌ ಕುಮಾರ್‌ ಕುಟುಂಬದ ಕುಡಿ, ದೊಡ್ಮನೆ ಹುಡುಗ ಯುವರಾಜ್‌ ಕುಮಾರ್‌ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ.

ಪತ್ನಿ ಶ್ರೀದೇವಿಗೆ ವಿಚ್ಛೇದನ ಕೊಡಲು  ಯುರಾಜ ಕುಮಾರ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಯುವರಾಜ್‌ ಕುಮಾರ್ ತನ್ನ ಪತ್ನಿ ಜೊತೆಗಿನ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ 6 ತಿಂಗಳಿನಿಂದ ಯುವರಾಜ್‌ ಕುಮಾರ್‌ ಹಾಗೂ ಪತ್ನಿ ಶ್ರೀದೇವಿ ಬೇರೆ ಬೇರೆಯಾಗಿದ್ದು, ಇಬ್ಬರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎನ್ನಲಾಗಿದೆ.

ಯುವರಾಜ್‌ ಕುಮಾರ್‌ 2019 ರಲ್ಲಿ ಮೈಸೂರು ಮೂಲದ ಶ್ರೀದೇವಿಯನ್ನು ಮದುವೆಯಾಗಿದ್ದರು. ಇದೀಗ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ವಿಚ್ಚೇದನಕ್ಕೆ ಅರ್ಜಿ ಹಿನ್ನೆಲೆಯಲ್ಲಿ ಪತ್ನಿ ಶ್ರೀದೇವಿಗೆ ನೋಟಿಸ್ ನೀಡಲಾಗಿದೆ.

Ke words: Dodmane boy, Actor,  Yuvraj Kumar , divorce