ಮೈಸೂರು ವಿವಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ: ವಿದ್ಯಾರ್ಥಿಗಳಿಂದ ಕೃತಜ್ಞತೆ.

ಮೈಸೂರು,ಸೆಪ್ಟಂಬರ್,6,2021(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಸಂಶೋಧನಾ ಕಾರ್ಯಕೈಗೊಂಡಿರುವ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕೋಶದ ವತಿಯಿಂದ ಶಿಷ್ಯ ವೇತನ ನೀಡಲು ಆದೇಶ ಹೊರಡಿಸಿರುವ ಹಿನ್ನೆಲೆ, ಮೈಸೂರು ವಿವಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಮೊದಲ ಬಾರಿಗೆ 2021-22ನೇ ಸಾಲಿನಿಂದ 44 ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡಲು ಮೈಸೂರು ವಿಶ್ವವಿದ್ಯಾನಿಲಯವು ಆದೇಶ ಹೊರಡಿಸಿರುವುದು ಸಂತೋಷದ ಸಂಗತಿ. ಇದು ಮೈಸೂರು ವಿವಿಯ ಐತಿಹಾಸಿಕ ನಿರ್ಧಾರವಾಗಿದ್ದು, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹಿಸಿದೆ. ಇದನ್ನು ಮೈಸೂರು ವಿವಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳು ಸ್ವಾಗತಿಸುತ್ತೇವೆ. ಹಾಗೂ ಇದಕ್ಕೆ ಕಾರಣಿಭೂತರಾದ ಮೈವಿವಿಯ ಕುಲಪತಿಗಳು. ಕುಲಸಚಿವರು, ಸಿಂಡಿಕೇಟ್ ಸದಸ್ಯರುಗಳು, ಶಿಷ್ಯವೇತನ ಆಯ್ಕೆ ಸಮಿತಿ, ಇವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮೈಸೂರು ವಿವಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಹಿಂದುಳಿದ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ(OBC) ಸಂಶೋಧನಾ ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತು ಇದಕ್ಕಾಗಿ ಶ್ರಮಿಸಿರುವ ಸಿಂಡಿಕೆಟ್ ಸದಸ್ಯರಾದ ಡಾ.ಚೈತ್ರ ನಾರಾಯಣ್ ರವರಿಗೂ ಸಹ ಧನ್ಯವಾದಗಳು. ಮುಂದಿನ ದಿನಗಳಲ್ಲಿ ವಿವಿಯು ಆರ್ಥಿಕವಾಗಿ ಹಿಂದುಳಿದ ವರ್ಗಗಳ(OBC) ಸಂಶೋಧನಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸಂಶೋಧನೆ ಕೈಗೊಳ್ಳಲು ಪೂರಕವಾದ ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸಬೇಕೆಂದು ಮೈಸೂರು ವಿವಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ENGLISH SUMMARY…

Stipend to Backward Caste Research students of UoM: Students express gratitude
Mysuru, September 6, 2021 (www.justkannada.in): Following orders issued by the University of Mysore to provide a stipend to the students who are doing research works, they have expressed their gratitude.
The University of Mysore has announced to provide stipend to 44 eligible research students from the year 2021-22 for the first time, which is indeed happy to note. It is a historic decision taken by the University of Mysore and it will encourage backward castes students who are financially backward to undertake higher education. The backward caste students will welcome this and extend our gratitude and salutations to the Vice-Chancellor, syndicate members, stipend selection committee, and all others.
Keywords: University of Mysore/ Backward caste students/ stipend/ decision/ students gratitude

Key words: Scholarship – Research -Students -Backward Classes -Mysore university