ಈ ಬಾರಿ ಮೈಸೂರು ದಸರಾ ಮಹೋತ್ಸವಕ್ಕೆ ಬಂಡೀಪುರದ ಮೂರು ಆನೆಗಳು ಆಯ್ಕೆ.

ಮೈಸೂರು,ಸೆಪ್ಟಂಬರ್,6,2021(www.justkannada.in):  ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ ಈ ಬಾರಿಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಜಂಬೂ ಸವಾರಿಗೆ ಬಂಡೀಪುರದ ಮೂರು ಆನೆಗಳನ್ನ ಆಯ್ಕೆ ಮಾಡಲಾಗಿದೆ.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ರಾಂಪುರ ಆನೆ ಶಿಬಿರಕ್ಕೆ ಮೈಸೂರು ಡಿಸಿಎಫ್ ಕಾರಿಕಾಳನ್ ಭೇಟಿ ನೀಡಿದರು. ಈ ಬಾರಿಯ ಜಂಬೂಸವಾರಿಗೆ ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಆನೆಗಳು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಲಾಗಿದೆ.

ಸರಳ ದಸರಾ ಆಚರಣೆ ಹಿನ್ನೆಲೆ ಎಷ್ಟು ಆನೆಗಳು ಭಾಗವಹಿಸಬೇಕು ಎಂಬುದನ್ನ ನಿರ್ಧರಿಸಬೇಕಿದೆ.  ಅಕ್ಟೋಬರ್ 7 ರಂದು ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದ್ದು ಅಕ್ಟೋಬರ್ 15 ರಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.

Key words: select- three -elephants – Bandipur – Mysore Dasara