ಸತೀಶ್ ನೀನಾಸಂ ‘ಬ್ರಹ್ಮಚಾರಿ’ ಅವತಾರದ ಎರಡನೇ ಟೀಸರ್ ಬಿಡುಗಡೆ !

ಬೆಂಗಳೂರು, ನವೆಂಬರ್ 05, 2019 (www.justkannada.in): ಸತೀಶ್ ನೀನಾಸಂ ಮತ್ತು ಅದಿತಿ ಪ್ರಭುದೇವಾ ನಟನೆಯ ಬ್ರಹ್ಮಚಾರಿ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದೆ.

ಕೌಟುಂಬಿಕ ಕಥೆ ಹೊಂದಿರುವ ಸಿನಿಮಾದಲ್ಲಿ ನವೀರಾದ ಹಾಸ್ಯವಿರುವುದು ಟೀಸರ್ ನಿಂದ ಗೊತ್ತಾಗುತ್ತಿದೆ. ಸತೀಶ್ ನೀನಾಸಂಗೆ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.

ಸತೀಶ್ ನೀನಾಸಂ ಸ್ನೇಹಿತರ ಪಾತ್ರದಲ್ಲಿ ಶಿವರಾಜ್ ಕೆಆರ್ ಪೇಟೆ ಮತ್ತು ಅಶೋಕ್ ನಟಿಸಿದ್ದಾರೆ. ಹಿರಿಯ ನಟ ದತ್ತಣ್ಣ ಹಾಗೂ ಅಚ್ಯುತ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಚಂದ್ರ ಮೋಹನ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.