ಯೂ ಟ್ಯೂಬ್’ನಲ್ಲಿ ಏಳು ಜನ ನಿರ್ದೇಶಕರ ‘ಕಥಾ ಸಂಗಮ’ ಟ್ರೆಂಡಿಂಗ್ !

ಬೆಂಗಳೂರು, ನವೆಂಬರ್ 05, 2019 (www.justkannada.in): ‘ಕಥಾ ಸಂಗಮ’ ಟ್ರೇಲರ್ ನಿನ್ನೆ (ನವೆಂಬರ್ 4) ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ.

ಯೂಟ್ಯೂಬ್ ನಲ್ಲಿ 15 ಗಂಟೆಗಳಲ್ಲಿ 1 ಲಕ್ಷ 50 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಟ್ರೇಲರ್ ಟ್ರೆಂಡಿಂಗ್ ಒನ್ ಸ್ಥಾನವನ್ನು ಏರಿದೆ.  ಏಳು ಕಥೆಗಳು ಸಿನಿಮಾದಲ್ಲಿ ಇವೆ. ಏಳು ನಿರ್ದೇಶಕರು ಒಂದೊಂದು ಕಥೆ ಹೇಳಿದ್ದಾರೆ.

ಏಳು ಜನ ಕ್ಯಾಮರಾ ಮ್ಯಾನ್ ಗಳು ಕೆಲಸ ಮಾಡಿದ್ದಾರೆ. ಹೆಚ್ ಕೆ ಪ್ರಕಾಶ್, ಪ್ರದೀಪ್ ಎನ್ ಆರ್, ಹಾಗೂ ರಿಷಬ್ ಶೆಟ್ಟಿ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.