ಇಂದು ವಿ.ಹರಿಕೃಷ್ಣಗೆ ಜನ್ಮ ದಿನದ ಸಂಭ್ರಮ

ಬೆಂಗಳೂರು, ನವೆಂಬರ್ 05, 2019 (www.justkannada.in): ಇಂದು ವಿ.ಹರಿಕೃಷ್ಣ ಅವರಿಗೆ ಜನ್ಮ ದಿನದ ಸಂಭ್ರಮ.

ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಸಂಗೀತ ಮಾಂತ್ರಿಕ. ಈಗಾಗಲೇ ಹರಿಕೃಷ್ಣ ಅವರಿಗೆ ಅಭಿಮಾನಿಗಳು ಸೇರಿದಂತೆ ಸಿನಿಮಾ ರಂಗದ ಸ್ನೇಹಿತರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಹಂಸಲೇಖ ಮತ್ತು ರವಿಚಂದ್ರನ್ ಜೋಡಿಯಂತೆ ದರ್ಶನ್ ಮತ್ತು ಹರಿಕೃಷ್ಣ ಜೋಡಿ ಸಾಕಷ್ಟು ಹೆಸರು ಗಳಿಸಿದೆ. ಇನ್ನು ಹರಿಕೃಷ್ಣ ‘ಡಿ-ಬೀಟ್ಸ್’ ಎಂಬ ಆಡಿಯೊ ಕಂಪನಿಯನ್ನು ಹೊಂದಿದ್ದು, ‘ಬುಲ್ ಬುಲ್’ ಚಿತ್ರದಿಂದ ಸಂಗೀತವನ್ನು ತನ್ನ ಸ್ವಂತ ಕಂಪನಿಯಲ್ಲಿ ಸಂಯೋಜಿಸಿದ್ದರು.