ಉಪ್ಪಿ ಟ್ವೀಟ್ ಗೆ ಆಕ್ರೋಶ : ಸ್ಯಾಂಡಲ್ವುಡ್ ಬುದ್ಧಿವಂತನ ಕಾಲೆಳೆದ ನೆಟ್ಟಿಗರು

 

ಬೆಂಗಳೂರು, ಮೇ 06, 2019 : (www.justkannada.in news ) ‘ರಿಯಲ್‌ ಸ್ಟಾರ್’ ಉಪೇಂದ್ರ ಸ್ಯಾಂಡಲ್ವುಡ್ ನ ‘ಬುದ್ಧಿವಂತ’. ಆದರೆ ಈ ಬುದ್ಧಿವಂತನನ್ನು ನೆಟ್ಟಿಗರು ಕಾಲೆಳೆಯುವ ಮೂಲಕ ಅವರದ್ದೇ ಜನಪ್ರಿಯ ಡೈಲಾಗ್ ` ಎಲ್ರಾ ಕಾಲ್ ಎಳೆತದೆ ಕಾಲಾ…’ ಜ್ಞಾಪಿಸಿದ್ದಾರೆ.

ನಡೆದಿರುವುದಿಷ್ಟು….
ಉಪ್ಪಿ ಕುಟುಂಬ ಸಮೇತ ಅಮೆರಿಕ ಪ್ರವಾಸಕೈಗೊಂಡಿದ್ದಾರೆ. ಪತ್ನಿ ಪ್ರಿಯಾಂಕ ಹಾಗೂ ಮಕ್ಕಳ ಜತೆ ಅಲ್ಲಿನ ಟೂರಿಸ್ಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬರಿ ಇಷ್ಟೆ ಹಾಗಿದ್ರೆ ಪರ್ವಾಗಿಲ್ಲ, ಉಪ್ಪಿ ಫೋಟೊ ಅಪ್‌ಲೋಡ್‌ ಮಾಡುವುದರ ಜತೆಗೆ ವಿದೇಶ ಹಾಗೂ ಭಾರತದ ಸ್ಥಳಗಳ ಫೋಟೊ ಹಾಕಿ ಗೇಲಿ ಮಾಡಿದ್ದು ನೆಟ್ಟಿಗರ ಕಣ್ ಕೆಂಪಾಗಿಸಿತು.

ವಿದೇಶದ ಸುಸಜ್ಜಿತ ರಸ್ತೆ ಜತೆಗೆ ಭಾರತ ರಸ್ತೆ ( ಚರಂಡಿ ನೀರು ಹರಿವ) ಫೋಟೊ ಹಾಕಿ, ‘ಸಕಾರಾತ್ಮಕ ಯೋಚನೆ ಮತ್ತು ಕನಸುಗಳಿಂದ ನಮ್ಮ ದೇಶ, ರಾಜ್ಯ ಹೀಗಾಗುವುದು ಖಂಡಿತ ಸಾಧ್ಯ’ ಎಂದು ಟ್ವೀಟ್‌ ಮಾಡಿದ್ದಾರೆ.

ಜತೆಗೆ ನಮ್ಮ ದೇಶಕ್ಕೂ ಬೇರೆ ದೇಶಕ್ಕೂ ಇರುವ ವ್ಯತ್ಯಾಸ. ರಾಜಕೀಯದ ಕೊಡುಗೆ…’ ಎಂದು ಬರೆದುಕೊಂಡಿದ್ದಾರೆ.
‘ಪ್ರಜಾಕೀಯ UPP ಅಂದರೆ ನಿಜವಾದ ಪ್ರಜಾಪ್ರಭುತ್ವ… ನೀವು ಹೇಳಿದಂತೆ ಕೇಳುವ ನಿಮ್ಮದೇ ಅಧಿಕಾರವಿರುವ ವ್ಯವಸ್ಥೆ… ನಮಗೆ ಕೆಲಸ ಕೊಡಿ ಎಂದು ಕೇಳಿಕೊಳ್ಳುವ ಸ್ಥಿತಿಯೇ ಇರುವುದಿಲ್ಲ… ಹಣ, ಖ್ಯಾತಿ, ಜಾತಿ ನಾಯಕರಂತೆ ಜನಪ್ರತಿನಿಧಿಗಳನ್ನು ನೋಡುವ ರಾಜಕೀಯದಿಂದ ಸಂಪೂರ್ಣವಾಗಿ ನಾವು ಬದಲಾಗಬೇಕಿದೆ’ ಎಂದು ಉಪ್ಪಿ ಟ್ವೀಟ್‌ ಮಾಡಿದ್ದಾರೆ.

‘ನೀವು ಕೆಲಸ ಕೊಡಿ ಅಂತ ಕೇಳೋ ತರ ಮಾಡಿರೋದು ರಾಜಕೀಯ… ನಿಮ್ ಹತ್ರ ಕೆಲಸ ಕೊಡೀ ಅಂತ ಕೇಳೋದು ಪ್ರಜಾಕೀಯ… ನಿಮಗೆ ಯಾವುದು ಬೇಕು?’ ಎಂದು ಉಪೇಂದ್ರ ‍ಪ್ರಶ್ನಿಸಿದ್ದಾರೆ.

ಇದಕ್ಕೆ ನೆಟ್ಟಿಗರು ಕೋಪಿಸಿಕೊಂಡು, ನಿನ್ನೆ ಇಡೀ ದಿನ #karnatakajobsforkannadigas ಟ್ರೆಂಡ್ ಆಯ್ತಲ್ಲ ಉಪೇಂದ್ರ ಅವರೆ . ಕನ್ನಡಿಗರಾಗಿ ನಿಮ್ಮ ಪ್ರತಿಕ್ರಿಯೆ ಕಾಣಲೇ ಇಲ್ಲ ಎಂದು abhishek gj (@gj_abhishek) ಪ್ರಶ್ನಿಸಿದರೆ, “ನಿಮ್ಮಂತವರ ಬೆಂಬಲ ಬೇಕಾದಾಗ ನೀವು ಕಾಣಿಸ್ಕೊಳೋದೇ ಇಲ್ವಲ್ಲ ಸರ್. ನಿನ್ನೆ ಎಲ್ಲೂ ಇರ್ಲಿಲ್ಲ. ಎಂದು — Rekha (@Rekha56072047) ಎನ್ನುವವರು ನಟ ಉಪೇಂದ್ರ ಅವರ ಕಾಲೆಳೆದಿದ್ದಾರೆ.

 

sandalwood star upendra’s tweet goes wrong, netizens pull actor leg