ಮೋದಿಗೆ ಸಂಸ್ಕಾರ, ರಾಜಕೀಯ ಜ್ಞಾನ ಇಲ್ಲ- ಏಕವಚನದಲ್ಲೇ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ…

ಕಲಬುರಗಿ, ಮೇ,6,2019(www.justkannada.in): ದೇಶಕ್ಕಾಗಿ ಪ್ರಾಣಕೊಟ್ಟ ರಾಜೀವ್ ಜೀ ಬಗ್ಗೆ ಮಾತನಾಡುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿದ್ದ ನರೇಂದ್ರ ಮೋದಿಗೆ ಮನೆ ಸಂಸ್ಕಾರವೇ ಇಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುಖರ್ಗೆ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ,  ಅಮೇಥಿಯಲ್ಲಿ ರಾಹುಲ್ ಗಾಂಧಿ  ಸೋಲುತ್ತಾರೆ ಎಂಬ ಹೇಳಿಕೆ ಕುರಿತು ಕಿಡಿಕಾರಿದರು. ನರೇಂದ್ರ ಮೋದಿಗೆ ರಾಜಕೀಯ ಜ್ಞಾನವೂ ಇಲ್ಲ, ಆರ್ಥಿಕ ಜ್ಞಾನವೂ ಇಲ್ಲ. ಅಮೇಥಿಯಲ್ಲಿ ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಗೆದ್ದರೇ ನೀವು ಆಯ್ಕೆಯಾಗುವ ಕ್ಷೇತ್ರಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಪ್ರಧಾನಿ ಮೋದಿಗೆ ಸವಾಲು ಹಾಕಿದರು.

ರಾಜೀವ್‍ಗಾಂಧಿಯವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಮೋದಿ ವಿರುದ್ಧ ಕಿಡಿಕಾರಿದ ಮಲ್ಲಿಕಾರ್ಜುನ ಖರ್ಗೆ, ಮೋದಿಗೆ ಹೃದಯವೇ ಇಲ್ಲ. ಸುಳ್ಳು ಹೇಳುವುದೇ ಮೋದಿಯವರ ಹುಟ್ಟುಗುಣ. ಯಾವ ವಿಚಾರ ಮಾತನಾಡಬೇಕೆಂಬ ಪ್ರಜ್ಞೆಯೂ ಇಲ್ಲ.  ಇಂತಹ ಪ್ರಧಾನಿ ಸಿಕ್ಕಿರುವುದು ನಮ್ಮ ದುರ್ದೈವ. ಕೇವಲ ಮಾತಿನಿಂದ ಮರಳು ಮಾಡುವವರಿಗೆ ಜನ ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಸೋಲುತ್ತಾರೆ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಖರ್ಗೆ . ಬಹುಶಃ ಯಡಿಯೂರಪ್ಪ ಅವರು ಒಳ್ಳೆಯ ಜ್ಯೋತಿಷಿ  ಇರಬಹುದು. ಹೀಗಾಗಿ ಭವಿಷ್ಯ ಹೇಳುತ್ತಿದ್ದಾರೆ. ನಾವು ಕೆಲಸದ ಮೇಲೆ ನಂಬಿಕೆ ಇಟ್ಟವರು. ಜನರ ಅಭಿಪ್ರಾಯದ ಮೇಲೆ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

Key words: Modi – no culture – political knowledge-Mallikarjun Kharge,