ಸ್ಥಳೀಯ ಚುನಾವಣೆಯಲ್ಲಿ ಹೊಂದಾಣಿಕೆ ಕಷ್ಟ- ಜೆಡಿಎಸ್ ನಿಂದ ಬಿಜೆಪಿಗೆ ಮತ ಎಂಬ ಸಚಿವ ಜಿಟಿಡಿ ಹೇಳಿಕೆ ಸಮರ್ಥಿಸಿಕೊಂಡ ಸಾ.ರಾ ಮಹೇಶ್…

ಮೈಸೂರು,ಮೇ,6,2019(www.justkannada.in): ಲೋಕಸಭಾ ಚುನಾವಣೆಗೆ ಮೈಸೂರಿನಲ್ಲಿ ಜೆ.ಡಿ.ಎಸ್ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆ ಎಂಬ ಸಚಿವ ಜಿ.ಟಿ ದೇವೇಗೌಡರ ಹೇಳಿಕೆಯನ್ನ ಸಮರ್ಥಿಸಿಕೊಂಡ ಸಚಿವ ಸಾ.ರಾ ಮಹೇಶ್,  ಜಿ.ಟಿ.ದೇವೆಗೌಡರು ಅವರಿಗಿರುವ ಮಾಹಿತಿ ಮೇರೆಗೆ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಸಾ.ರಾ ಮಹೇಶ್, ಇಲ್ಲಿ ನಮ್ಮ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಆದರೆ ಸಚಿವ ಜಿ.ಟಿ ದೇವೇಗೌಡರು ಒಂದು ಬೂತ್ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. ಇಡೀ ಲೋಕಸಭ ವ್ಯಾಪ್ತಿಯಲ್ಲಿ ನಾಯಕರು ತೀರ್ಮಾನಿಸಿದ್ದಂತೆ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದೇವೆ. ಮಂಡ್ಯದಲ್ಲಿ ನಾವು ಲಕ್ಷ ಮತಗಳ ಅಂತದಿಂದ ಗೆಲ್ಲುತ್ತೇವೆ. ಮೈಸೂರಿನಲ್ಲಿ ಮತಗಳ ಅಂತರ ಕಡಿಮೆಯಾಗುತ್ತೆ. ಆದರೆ ನಾವು ಇಲ್ಲಿಯು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಪ್ರೆಂಡ್ಲಿ ಪೈಟ್ ಮಾಡ್ತಿವಿ. ಎರಡು ಪಕ್ಷದಲ್ಲೂ ಗೆದ್ದವರು ಸೋತವರು ಇದ್ದಾರೆ. ಚುನಾವಣೆಗಾಗಿ ಇಬ್ಬರು ತಯಾರಿ ಮಾಡಿಕೊಂಡಿದ್ದಾರೆ. ನಾವು ಹೊಂದಾಣಿಕೆ‌ ಮಾಡಿಕೊಂಡರೆ ಬೇರೆ ಪಾರ್ಟಿ ಬಾಗಿಲಿಗೆ ಹೋಗುತ್ತಾರೆ. ಇಲ್ಲವೆ ಪಕ್ಷೇತ್ತರವಾಗಿ ಸ್ಪರ್ಧೆ ಮಾಡ್ತಾರೆ. ಈ‌ ಕಾರಣದಿಂದ ನಾವು ಪ್ರೆಂಡ್ಲಿ ಪೈಟ್ ಮಾಡ್ತಿವಿ. ಹೀಗಾಗಿ ಸ್ಥಳೀಯ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ. ಒಂದು ವೇಳೆ ವರಿಷ್ಠರು ತೀರ್ಮಾನ‌ ಮಾಡಿದ್ರೆ ಹೊಂದಾಣಿಕೆಯಾಗುತ್ತದೆ ಎಂದು ಸಚಿವ ಸಾ.ರಾ. ಮಹೇಶ್ ತಿಳಿಸಿದರು.

Key words  Sa.Ra Mahesh-justified – statement – minister -GT devegowda