ಸದ್ಯದಲ್ಲೇ ಸ್ಯಾಂಡಲ್‌ ವುಡ್‌ ಸಿಲ್ವರ್‌ ಸ್ಕ್ರೀನ್‌ ಗೆ ʼ ಪೆನ್‌ ಡ್ರೈವ್ʼ !

sandalwood, new movie, based on, Hassan mp controversy, pen drive

 

ಬೆಂಗಳೂರು, ಮೇ.24,2024: (www.justkannada.in news )  ಸಮಾಜದಲ್ಲಿ ಸಂಚಲನ ಮೂಡಿಸಿದ ನೈಜ್ಯ ಘಟನೆಗಳನ್ನು ಆಧರಿಸಿ ಸಿನಿಮಾ ತಯಾರುವುದು ಹೊಸತೇನಲ್ಲ. ಈ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಗೊಂಡಿರುವುದು ʼ ಪೆನ್‌ ಡ್ರೈವ್‌ ʼ.

ರಾಜಕೀಯ ಕ್ಷೇತ್ರದಲ್ಲಿ ತಲ್ಲಣ ಮೂಡಿಸಿ ಸಾಮಾಜಿಕವಾಗಿ ದೊಡ್ಡ ಆಘಾತವನ್ನು ಉಂಟು ಮಾಡಿದ ಘಟನೆ, ಹಾಸನದ ಸಂಸದ ಪ್ರಜ್ವಲ್‌ ರೇವಣ್ಣನ ಪೆನ್‌ ಡ್ರೈವ್‌ ಘಟನೆ.

ಇದೀಗ ಈ ಹಗರಣವನ್ನೇ ಬಂಡವಾಳವಾಗಿಟ್ಟುಕೊಂಡು ಸಿನಿಮಾವೊಂದು ಸೆಟ್ಟೆರಲಿದೆ. ಸದ್ಯ ‘ಪೆನ್‌ಡ್ರೈವ್’ ಸಾಕಷ್ಟು ಸದ್ದು ಮಾಡುತ್ತಿದೆ. ಅದನ್ನೇ ಶೀರ್ಷಿಕೆಯಾಗಿಸಿಕೊಂಡು ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ.

ಈ ಹಿಂದೆ ‘ಪಾತರಗಿತ್ತಿ’ ಚಿತ್ರ ನಿರ್ಮಿಸಿ, ನಿರ್ದೇಶನ ಮಾಡಿದ್ದ ಕೆರ್ನಳ್ಳಿ ಈಶ್ವರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸೂಪರ್ ಮೂವೀಸ್ ಮೇಕರ್ಸ್ ಅಡಿಯಲ್ಲಿ ಲೋಕೇಶ್.ಆರ್ ಬಂಡವಾಳ ಹೂಡುತ್ತಿದ್ದಾರೆ. ‘ದೊಡ್ಡವರಲ್ಲ ಜಾಣರಲ್ಲʼ  ಎಂಬುದು ಚಿತ್ರದ ಟ್ಯಾಗ್‌ ಲೈನ್.

‘ಶೀರ್ಷಿಕೆಗೂ ಕಥೆಗೂ ಏನು ಸಂಬಂಧ? ಎಂಬುದನ್ನು ಸಿನಿಮಾದಲ್ಲಿಯೇ ತಿಳಿಯಲಿದೆ. ಎಲ್ಲರೂ ಊಹಿಸುವಂತಹ ಪಾತ್ರಗಳು ಬರುತ್ತದೆ. ಪೆನ್ ಡ್ರೈವ್ ಎನ್ನುವುದು ಒಂದು ವಿಶ್ವ. ಅದರೊಳಗಡೆ ಏನನ್ನಾದರೂ ತುಂಬಿಸಬಹುದು. ಆದರೆ ಅದರ ಒಳಗಡೆ ಜನರು ನಿರೀಕ್ಷೆ ಮಾಡುವುದಕ್ಕಿಂತ ಹೆಚ್ಚಾದ ವಿಷಯಗಳು ಇರುತ್ತವೆ. ದೊಡ್ಡವರು ಅಥವಾ ಚಿಕ್ಕವರಿರಬಹುದು. ಸಮಾಜದ ಎಲ್ಲಾ ಮುಖಗಳು ಸಿಗುತ್ತದೆ  ಎಂಬುದು ನಿರ್ದೇಶಕರ ಅಂಬೋಣ.

ಬೆಂಗಳೂರು, ಬಳ್ಳಾರಿ, ಹಾಸನ, ಸಕಲೇಶಪುರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಹಂಸರಾಗ ಸಂಗೀತ, ವಿಜಯ್ ರಾಘವ್ ಛಾಯಾಚಿತ್ರಗ್ರಹಣ, ಜೀವನ್‌ರಾಂ ಸಂಕಲನ ಇರಲಿದೆ.

ಸಮಾಜದಲ್ಲಿ ಸಂಚಲ ಮೂಡಿಸಿದ ಘಟನೆಗಳು ನಡೆದಾಗ, ಈ ರೀತಿ ಸಿನಿಮಾ ಘೋಷಣೆಯಾಗುತ್ತದೆ. ಆನಂತರ ಅದು ಜಸ್ಟ್‌  ಪೋಸ್ಟರ್‌ಗೆ ಮಾತ್ರ ಸೀಮಿತವಾಗುತ್ತದೆ. ಹಾಗಾಗಿ ʼ ಪೆನ್‌ ಡ್ರೈವ್‌  ʼ ಸಮಾಚಾರ ಏನು ಎಂಬುದನ್ನು ಕಾದು ನೋಡಬೇಕು.

key words: sandalwood, new movie, based on, Hassan mp controversy, pen drive