ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಪ್ರಕರಣ: ಆರೋಪಿ ಆದಿತ್ಯ ಆಳ್ವಾ ಅರೆಸ್ಟ್…

ಬೆಂಗಳೂರು,ಜನವರಿ,12,2021(www.justkannada.in): ಸ್ಯಾಂಡಲ್ ವುಡ್ ಗೆ  ​ ಡ್ರಗ್ಸ್ ದಂಧೆ ನಂಟು​ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಆರೋಪಿಯಾದ  ಆದಿತ್ಯ ಆಳ್ವಾನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.jk-logo-justkannada-mysore

ಡ್ರಗ್ಸ್ ಆರೋಪಿಗಳಲೊಬ್ಬನಾದ ಆದಿತ್ಯ ಆಳ್ವನನ್ನು ಸಿಸಿಬಿ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ. ಆರೋಪಿ ಆದಿತ್ಯಾ ಆಳ್ವಾ ಪದೇ ಪದೇ ಜಾಗ ಬದಲಾಯಿಸುತ್ತಿದ್ದು ಈ ನಡುವೆ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಪೊಲೀಸರು ಆರೋಪಿ ಆದಿತ್ಯ ಆಳ್ವಾ ಬಂಧಿಸಿದ್ದಾರೆ.Sandalwood - drug –case-accused - Aditya Alva -Arrest.

ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರನಾಗಿರುವ ಆದಿತ್ಯ ಕಳೆದ ನಾಲ್ಕು ತಿಂಗಳಿಂದ ತಲೆಮರೆಸಿಕೊಂಡುಡಿದ್ದ. ನಿರೀಕ್ಷಣಾ ಜಾಮೀನು ಕೋರಿ ಆದಿತ್ಯ ಆಳ್ವಾ ಸಲ್ಲಿಸಿದ್ದ ಅರ್ಜಿ ಕೂಡ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಚೆನ್ನೈನಲ್ಲಿ ಆದಿತ್ಯ ಆಳ್ವಾ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Key words: Sandalwood – drug –case-accused – Aditya Alva -Arrest.