Thursday, September 17, 2026

BDA Apartments

ನಟಿ ಸಂಜನಾ ಮತ್ತು ನಿರ್ಮಾಪಕಿ ನಡುವೆ ಸ್ಟಾರ್ ಹೋಟೆಲ್ ನಲ್ಲಿ ಕಿತ್ತಾಟ… BDA JK_Adv B...
Home Cinema ನಟಿ ಸಂಜನಾ ಮತ್ತು ನಿರ್ಮಾಪಕಿ ನಡುವೆ ಸ್ಟಾರ್ ಹೋಟೆಲ್ ನಲ್ಲಿ  ಕಿತ್ತಾಟ…

ನಟಿ ಸಂಜನಾ ಮತ್ತು ನಿರ್ಮಾಪಕಿ ನಡುವೆ ಸ್ಟಾರ್ ಹೋಟೆಲ್ ನಲ್ಲಿ  ಕಿತ್ತಾಟ…

ಬೆಂಗಳೂರು,ಡಿ,27,2019(www.justkannada.in): ಸ್ಯಾಂಡಲ್ ವುಡ್ ನಟಿ ಸಂಜನಾ ಮತ್ತು ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್  ನಡುವೆ ಬೆಂಗಳೂರಿನ ಸ್ಟಾರ್ ಹೋಟೆಲ್ ನಲ್ಲಿ  ಗಲಾಟೆ ನಡೆದಿದೆ.

ಭಾನುವಾರ ರಾತ್ರಿ ರಿಚ್ಮಂಡ್ ಟೌನ್‌  ಬಳಿಯ ಸ್ಟಾರ್ ಹೋಟೆಲೊಂದರಲ್ಲಿ  ಇಬ್ಬರು ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ.  ನಟಿ ಸಂಜನಾ ಅವರು ವಿಸ್ಕಿ ಬಾಟೆಲ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಿರ್ಮಾಪಕಿ ವಂದನಾ ಜೈನ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಬಳಿಕ ಇಬ್ಬರು ಮಾತನಾಡಿಕೊಂಡು ಕೇಸ್ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.

ಘಟನೆ  ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಸಂಜನಾ, ನನ್ನ ಮತ್ತು ನಿರ್ಮಾಪಕಿ ನಡುವೆ ಸಣ್ಣಪುಟ್ಟ ಜಗಳ ಆಗಿದೆ. ಆದರೆ ಹೊಡೆದಾಟ ಏನೂ ನಡೆದಿಲ್ಲ.  ನಮ್ಮಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು ಹೌದು. ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ಆಯ್ತು  ಅದಬಿಟ್ಟು ಯಾವುದೇ ಘಟನೆ ನಡೆದಿಲ್ಲ.  ನಾನು ನನ್ನ ಮನೆಯಲ್ಲೇ ಆರಾಮವಾಗಿಯೇ ಇದ್ದೇನೆ. ಅವರು ಅವರ ಮನೆಯಲ್ಲಿ ಆರಾಮವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

Key words: Sandalwood actress –sanjana-clashes -between – producer –bangalore- Star Hotel.