ಉಪೇಂದ್ರ ಸಿನಿಮಾದಲ್ಲಿ ಸಮುದಿರಕಣಿ ವಿಲನ್ ರೋಲ್

ಬೆಂಗಳೂರು, ಜನವರಿ 08, 2019 (www.justkannada.in): ಉಪೇಂದ್ರ ಸಿನಿಮಾದಲ್ಲಿ ತಮಿಳಿನ ಖ್ಯಾತ ನಟ, ನಿರ್ದೇಶಕ ಸಮುದಿರಕಣಿ ವಿಲನ್ ರೋಲ್ ಮಾಡಲಿದ್ದಾರೆ.

ಆದರೆ ಈ ಕುರಿತು ನ್ನೂ ಫೈನಲ್ ನಿರ್ಧಾರ ಆಗಿಲ್ಲ. ಸಮುದಿರಕಣಿ ಜತೆ ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಶೂಟಿಂಗ್ ಗೆ ದಿನಗಣನೆ ಶುರುವಾಗಿದೆ.

ಕಬ್ಜ 80 ದಶಕದ ಅಂಡರ್ ವರ್ಲ್ಡ್ ಕುರಿತಾದ ಸಿನಿಮಾವಾಗಿದ್ದು, ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಆರ್ ಚಂದ್ರು ನಿರ್ದೇಶನದ ಸಿನಿಮಾ ಇದಾಗಿದೆ.