ಕಿಚ್ಚನಿಗೆ ದುಬಾರಿ ಕಾರು ಗಿಫ್ಟ್ ಮಾಡಿದ ಸಲ್ಲು ಭಾಯ್

ಬೆಂಗಳೂರು, ಜನವರಿ 08, 2019 (www.justkannada.in): ಸುದೀಪ್ ಗೆ ಸಲ್ಮಾನ್ ದುಬಾರಿ ಬೆಲೆ ಬಿಎಂಡಬ್ಲ್ಯು ಎಂ5 ಮಾದರಿಯ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪ್ರೀತಿಯಿಂದ ಕೊಟ್ಟ ಗಿಫ್ಟ್ ನ್ನು ಸ್ವತಃ ಸಲ್ಮಾನ್ ಸುದೀಪ್ ಗೆ ಹಸ್ತಾಂತರಿಸಿದ್ದಾರೆ. ದಬಾಂಗ್ 3 ಸಿನಿಮಾದಲ್ಲಿ ಜತೆಯಾಗಿ ಅಭಿನಯಿಸಿದ ಮೇಲೆ ಸಲ್ಮಾನ್ ಖಾನ್ ಜತೆಗಿನ ಕಿಚ್ಚ ಸುದೀಪ್ ಸ್ನೇಹ ಗಟ್ಟಿಯಾಗಿದೆ.

ಈ ಸ್ನೇಹದ ಸಂಕೇತವಾಗಿ ಕಿಚ್ಚ ಸುದೀಪ್ ಮನೆ ಮುಂದೆ ಭರ್ಜರಿ ಗಿಫ್ಟ್ ಒಂದು ಬಂದು ನಿಂತಿದೆ. ಸಲ್ಮಾನ್, ಸುದೀಪ್ ಹಾಗೂ ಸುದೀಪ್ ತಂದೆ ಕಾರಿನ ಜತೆಗೆ ತೆಗೆಸಿಕೊಂಡ ಖುಷಿಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಕಿಚ್ಚ ಗಿಫ್ಟ್ ಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.