ಅದ್ಧೂರಿಯಾಗಿ ರಾಕಿ ಭಾಯ್ ಬರ್ತ್ ಡೇ ಸೆಲೆಬ್ರೇಟ್ ಮಾಡುತ್ತಿದ್ದಾರೆ ಅಭಿಮಾನಿಗಳು

ಬೆಂಗಳೂರು, ಜನವರಿ 08, 2019 (www.justkannada.in): ಇಂದು ಯಶ್ ಜನ್ಮ ದಿನವಾಗಿದ್ದು, ಇದನ್ನು ಒಂದು ಹಬ್ಬದಂತೆ ಅಭಿಮಾನಿಗಳು ಆಚರಿಸುತ್ತಿದ್ದಾರೆ.

ನಗರದ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ವಿಶ್ವದ ಯಾವುದೇ ನಟನಿಗೂ ಮಾಡಿರದ ಅತೀ ದೊಡ್ಡ ಕಟೌಟ್ ನ್ನು ಅನಾವರಣಗೊಳಿಸಲಾಗುತ್ತದೆ.

ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಇದಕ್ಕಾಗಿ 216 ಅಡಿ ಎತ್ತರದ ಕಟೌಟ್ ಸಿದ್ಧವಾಗಿದ್ದು ಇಂದು ಅಭಿಮಾನಿಗಳು ತೆಂಗಿನ ಕಾಯಿ ಒಡೆದು ಆರತಿ ಎತ್ತಿ ಪೂಜೆ ಮಾಡಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸಲಿರುವ ಯಶ್ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ.