Wednesday, August 12, 2026

BDA Apartments

Home Cinema ‘ಸಲಾರ್’ ಉಗ್ರಂ ಅಥವಾ ಮತ್ಯಾವುದೇ ಸಿನಿಮಾ ರಿಮೇಕ್ ಅಲ್ಲ ಎಂದ ಪ್ರಶಾಂತ್ ನೀಲ್

‘ಸಲಾರ್’ ಉಗ್ರಂ ಅಥವಾ ಮತ್ಯಾವುದೇ ಸಿನಿಮಾ ರಿಮೇಕ್ ಅಲ್ಲ ಎಂದ ಪ್ರಶಾಂತ್ ನೀಲ್

ಬೆಂಗಳೂರು, ಫೆಬ್ರವರಿ 06, 2021 (www.justkannada.in):  ಮುಹೂರ್ತದಿಂದಲೇ ನಿರೀಕ್ಷೆ ಹುಟ್ಟಿಸಿರುವ ‘ಸಲಾರ್’‌ ರಿಮೇಕ್ ಅಥವಾ ಸ್ವಮೇಕ್‌ ಎಂಬುದರ ಕುರಿತು ನಿರ್ದೇಶಕ ಪ್ರಶಾಂತ್‌ ನೀಲ್ ಸ್ಪಷ್ಟನೆ ನೀಡಿದ್ದಾರೆ.

‘ಸಲಾರ್‌’ ಚಿತ್ರ ‘ಉಗ್ರಂ’ ರೀಮೇಕ್‌ ಎಂಬ ಸುದ್ದಿ ಓಡಾಡುತ್ತಿತ್ತು. ಈ ಕುರಿತು ಪ್ರಶಾಂತ್ ನೀಲ್ ಸ್ಪಷ್ಟನೆ ನೀಡಿದ್ದಾರೆ.

ಇದು ಯಾವುದೇ ಸಿನಿಮಾದ ರೀಮೇಕ್‌ ಅಲ್ಲ. ಇದು ಪ್ರಭಾಸ್‌ ಅವರನ್ನೇ ಗಮನದಲ್ಲಿಟ್ಟುಕೊಂಡು ಮಾಡಿರುವ ಕಥೆ ಎಂದಿದ್ದಾರೆ ಕೆಜಿಎಫ್ ಡೈರೆಕ್ಟರ್.

ಯಾವುದೇ ಹಾಲಿವುಡ್‌, ಬಾಲಿವುಡ್‌ ಸಿನಿಮಾಗಳ ಪ್ರೇರಣೆಯಿಂದಲೂ ಮಾಡಿರುವ ಸಿನಿಮಾವಲ್ಲ ಇದು ಎಂದು ಸ್ಪಷ್ಟಪಡಿಸಿದ್ದಾರೆ.