Sunday, September 13, 2026

BDA Apartments

ಕ್ಷಮೆಯಾಚಿಸಿದ ಸೈಫ್ ಅಲಿ ಖಾನ್‌ ‘ತಾಂಡವ್‌’ ಟೀಂ ! BDA JK_Adv BDA Adv
Home Cinema ಕ್ಷಮೆಯಾಚಿಸಿದ ಸೈಫ್ ಅಲಿ ಖಾನ್‌ ‘ತಾಂಡವ್‌’ ಟೀಂ !

ಕ್ಷಮೆಯಾಚಿಸಿದ ಸೈಫ್ ಅಲಿ ಖಾನ್‌ ‘ತಾಂಡವ್‌’ ಟೀಂ !

ಬೆಂಗಳೂರು, ಜನವರಿ 19, 2021 (www.justkannada.in): ನಟ ಸೈಫ್ ಅಲಿ ಖಾನ್‌ ಅಭಿನಯದ “ತಾಂಡವ್‌’ ವೆಬ್‌ಸಿರೀಸ್‌ ತಂಡ ಕ್ಷಮೆ ಯಾಚಿಸಿದೆ.

ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪ ಎದುರಿಸಿದ್ದ “ತಾಂಡವ್‌’ ತಂಡ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಈ ಕುರಿತು ಪ್ರಕಟಣೆ ಹೊರಡಿಸಿದ ತಂಡ, “ತಾಂಡವ್‌ ಒಂದು ಕಾಲ್ಪನಿಕ ಕಥೆಯಾಗಿದ್ದು, ಯಾವುದೇ ಧರ್ಮ, ಜಾತಿ, ಸಮುದಾಯ, ಪಂಗಡಕ್ಕೆ ಅಥವಾ ಅವರ ನಂಬಿಕೆಗೆ, ಭಾವನೆಗೆ ಧಕ್ಕೆ ತರುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ’ ಎಂದು ಸ್ಪಷ್ಟನೆ ನೀಡಿದೆ.

ಯಾರಿಗಾದರೂ ಇದರಿಂದ ನೋವಾಗಿದ್ದರೆ, ಅದಕ್ಕೆ ನಾವು ಬೇಷರತ್‌ ಕ್ಷಮೆ ಯಾಚಿಸುತ್ತೇವೆ’ ಎಂದು ವೆಬ್ ಸಿರೀಸ್ ತಂಡ ಹೇಳಿದೆ. ಅಂದಹಾಗೆ ಅಮೆಜಾನ್‌ ಪ್ರೈಮ್‌ನಲ್ಲಿ ಈ ವೆಬ್ ಸಿರೀಸ್ ಬಿಡುಗಡೆಯಾಗಿತ್ತು.