Wednesday, July 29, 2026

BDA Apartments

Home Cinema ‘ಗಂಗೂಬಾಯಿ ಕಥಿಯಾವಾಡಿ’ ಶೂಟಿಂಗ್ ವೇಳೆ ಅಲಿಯಾ ಭಟ್ ಅಸ್ವಸ್ಥ

‘ಗಂಗೂಬಾಯಿ ಕಥಿಯಾವಾಡಿ’ ಶೂಟಿಂಗ್ ವೇಳೆ ಅಲಿಯಾ ಭಟ್ ಅಸ್ವಸ್ಥ

ಬೆಂಗಳೂರು, ಜನವರಿ 19, 2021 (www.justkannada.in): ಚಿತ್ರೀಕರಣ ವೇಳೆ ಅಸ್ವಸ್ಥಗೊಂಡಿರುವ ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಲಿಯಾ ಭಟ್ ಸದ್ಯ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾ ಚಿತ್ರೀಕರಣದಲ್ಲಿ ನಿರತಾಗಿದ್ದಾರೆ.

ಶೂಟಿಂಗ್ ವೇಳೆ ಅಸ್ವಸ್ಥಗೊಂಡಿರುವ ಅಲಿಯಾ ಭಟ್ ಅವರನ್ನು ತಕ್ಷಣ ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಅಲಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲಿಯಾ ತಕ್ಷಣ ಆಸ್ಪತ್ರೆ ಸೇರಲು ಕಾರಣ ಅತಿಯಾದ ಅಸಿಡಿಟಿ ಎಂದು ಹೇಳಲಾಗುತ್ತಿದೆ.