ಥಿಯೇಟರ್’ಗಳಲ್ಲಿ ಸಾಹೋ ಅಬ್ಬರ: ವಿಮರ್ಶಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು, ಆಗಸ್ಟ್ 30, 2019 (www.justkannada.in):  ವಿಶ್ವಾದ್ಯಂತ ಇಂದು ಯಂಗ್ ರೆಬೆಲ್ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಬಿಡುಗಡೆಯಾಗಿದೆ.

ಟ್ರೈಲರ್, ಟೀಸರ್ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಈ ಚಿತ್ರವನ್ನು ಕೊನೆಗೂ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಬೆಂಗಳೂರಿನಲ್ಲೊಂದೇ ಸುಮಾರು 600 ಶೋಗಳನ್ನು ‘ಸಾಹೋ’ ಪ್ರದರ್ಶನ ಕಾಣುತ್ತಿವೆ

ಅನೇಕ ಕಡೆಗಳಲ್ಲಿ ಮಧ್ಯರಾತ್ರಿಯಿಂದಲೇ ‘ಸಾಹೋ’ ಅಬ್ಬರ ಆರಂಭಗೊಂಡಿದೆ. ಸಿನಿಮಾ ವೀಕ್ಷಿಸಿದ ಅನೇಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕೆಲವರು ಸಿನಿಮಾ ಬೊಂಬಾಟ್ ಎಂದರೆ, ಇನ್ನೂ ಕೆಲವರು ಬೋರಿಂಗ್ ಎಂದಿದ್ದಾರೆ. ಸಾಕಷ್ಟು ಸಿನಿಮಾ ವಿಮರ್ಷಕರು ‘ಸಾಹೋ’ ವೀಕ್ಷಿಸಿದ್ದು, ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ.