ಆಂಧ್ರದಲ್ಲಿ ದೇಶದ ಅತೀ ದೊಡ್ಡ ಥಿಯೇಟರ್ ಉದ್ಘಾಟಿಸಿದ ನಟ ರಾಮ್ ಚರಣ್

ನೆಲ್ಲೂರು, ಆಗಸ್ಟ್ 30, 2019 (www.justkannada.in): ನಟ ರಾಮ್ ಚರಣ್ ಸುಲ್ಲೂರುಪೇಟ ಬಳಿಯ ಪಿಂಡಿಪಲೆಂನಲ್ಲಿ ಬೃಹತ್ ಚಿತ್ರಮಂದಿರ ಉದ್ಘಾಟಿಸಿದರು.

ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆ, ಯುವಿ ಕ್ರಿಯೇಷನ್ಸ್ ಮಲ್ಟಿಪ್ಲೆಕ್ಸ್ ಥಿಯೇಟರ್ ಅನ್ನು 40 ಕೋಟಿ ರೂ ವೆಚ್ಚದಲ್ಲಿ ಈ ಥಿಯೇಟರ್ ನಿರ್ಮಿಸಿದ್ದು,. ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಇದು ದೇಶದಲ್ಲೇ ಅತಿ ದೊಡ್ಡದೆಂಬ ಹೆಮ್ಮೆಗೆ ಪಾತ್ರವಾಗಿದೆ.

ಥಿಯೇಟರ್ ಪರದೆಯು 100 ಅಡಿ ಅಗಲ, 54 ಅಡಿ ಎತ್ತರ 656 ಆಸನಗಳು. ಥಿಯೇಟರ್‌ನಲ್ಲಿ 3 ಡಿ ಸೌಂಡ್ ಸಿಸ್ಟಮ್ ಒಳಗೊಂಡಿದೆ.