ಶಾಲೆಗಳ ಕೊಠಡಿಗಳಿಗೆ ಕೇಸರಿ ಬಣ್ಣ ವಿಚಾರ: ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಾಗ್ದಾಳಿ.

ಬೆಂಗಳೂರು,ನವೆಂಬರ್,14,2022(www.justkannada.in): ಶಾಲೆಗಳ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಸಲೀಂ ಅಹ್ಮದ್,  ಈ ಸರ್ಕಾರ ಅಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. 3 ವರ್ಷದಿಂದ  ಇಂತಹದ್ದೇ ಕೆಲಸಗಳನ್ನ ಮಾಡುತ್ತಾ ಬಂದಿದೆ.  ಶಾಲೆಗಳ ಸಮಸ್ಯೆ ಬಗೆಹರಿಸುವುದನ್ನ ಬಿಟ್ಟು ಬಣ್ಣ ಬಳಿಯುತ್ತಾರಂತೆ . ಬಿಜೆಪಿ ಸರ್ಕಾರಿದಿಂದ ಯಾವುದೇ ಅಭಿವೃದ್ದಿಯಾಗುತ್ತಿಲ್ಲ. ಇದರಿಂದ ಜನ ಬೇಸತ್ತಿದ್ದಾರೆ.  ಅವರದ್ಧೇ ಪ್ರಕಾರ ಬಿಜೆಪಿ 65 ಸೀಟು ಕೂಡ ಗೆಲ್ಲಲ್ವಂತೆ ಎಂದು ಲೇವಿಡ ಮಾಡಿದರು.

ಗುಂಬಾಜ್ ಮಾದರಿ ಬಸ್ ನಿಲ್ದಾಣ ತೆರವು ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ  ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ ಸಲೀಂ ಅಹ್ಮದ್,  ಏನು ಮಾತನಾಡುತ್ತಿದ್ದೀರಿ ಅನ್ನೋ ಜ್ಞಾನ ಇರಬೇಕು. ಸರ್ಕಾರ ನಿರ್ಮಿಸಿರುವ ಬಸ್ ನಿಲ್ದಾಣಗಳನ್ನ ಒಡೆದು ಹಾಕುತ್ತೀರಾ..? ಇದಕ್ಕೆ ಪ್ರತಾಪ್ ಸಿಂಹ ಉತ್ತರ ನೀಡಲಿ ಎಂದು ಗುಡುಗಿದರು.

Key words: Saffron- color – school –rooms-KPCC- working- president Salim Ahmed