ಟಿಪ್ಪು ಪ್ರತಿಮೆ ನಿರ್ಮಾಣದಿಂದ ಜನರ ಭವಿಷ್ಯ ನಿರ್ಮಿಸಲು ಆಗಲ್ಲ- ತನ್ವೀರ್ ಸೇಠ್ ಗೆ ಶಾಸಕ ಎಸ್.ಎ ರಾಮದಾಸ್ ತಿರುಗೇಟು.

ಮೈಸೂರು,ನವೆಂಬರ್,14,2022(www.justkannada.in):  100 ಅಡಿ ಎತ್ತರದಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಖಚಿತ ಎಂದು ಹೇಳಿಕೆ ನೀಡಿದ್ಧ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗೆ ಶಾಸಕ ಎಸ್.ಎ ರಾಮದಾಸ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಎ ರಾಮದಾಸ್,  ತನ್ವೀರ್ ಸೇಠ್ ಮೊದಲು ಎನ್. ಆರ್ ಕ್ಷೇತ್ರದ ಜನರ ಭವಿಷ್ಯ ನಿರ್ಮಿಸಲು ಮುಂದಾಗಲಿ.  ಟಿಪ್ಪು ಪ್ರತಿಮೆ ನಿರ್ಮಾಣದಿಂದ ಜನರ ಭವಿಷ್ಯ ನಿರ್ಮಿಸಲು ಆಗಲ್ಲ. ರಾಜಕೀಯ ಲಾಭಕ್ಕಾಗಿ ತನ್ವೀರ್ ಸೇಠ್ ಹೇಳಿಕೆ ನೀಡಿದ್ದಾರೆ.  ಟಿಪ್ಪು ಪ್ರತಿಮೆ ನಿರ್ಮಾಣದಿಂದ ಯಾವುದೇ ರಾಜಕೀಯ ಲಾಭವಾಗುವುದಿಲ್ಲ . ಇಸ್ಲಾಂ ಧರ್ಮದಲ್ಲಿ ಮೂರ್ತಿಪೂಜೆಗೆ ಅವಕಾಶವಿಲ್ಲ ಎಂದರು.

ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ ಸುಳಿವು ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಎ ರಾಮದಾಸ್, ಸಿದ್ಧರಾಮಯ್ಯ ಚುನಾವಣೆ ಸ್ಪರ್ಧೆ ವಿಚಾರ ಅವರಿಗೆ ಬಿಟ್ಟಿದ್ದು. ಈ ಬಗ್ಗೆ ಮಾತನಾಡಲ್ಲ ಎಂದರು.

Key words: statue –MLA-Tanveer Sait- MLA -S.A. Ramdas