ಆರ್ ಎಸ್ ಎಸ್ ನವರದ್ಧು ತಾಲಿಬಾನ್ ಸಂಸ್ಕೃತಿ: ಮನುಷ್ಯತ್ವವೇ ಇಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ.

ಬಾಗಲಕೋಟೆ,ಸೆಪ್ಟಂಬರ್,28,2021(www.justkannada.in):  ಆರ್ ಎಸ್ ಎಸ್ ನವರದ್ಧು ತಾಲಿಬಾನ್ ಸಂಸ್ಕೃತಿ. ಅವರಿಗೆ ಮನುಷ್ಯತ್ವವೇ ಇಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆ ಬಾದಾಮಿಯಲ್ಲಿ  ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಆರ್ ಎಸ್ ಎಸ್ ನವರು ತಾಲಿಬಾನಿಗಳು.  ಆರ್ ಎಸ್ ಎಸ್,  ಬಿಜೆಪಿಗೆ ಮನುಷ್ಯತ್ವವೇ ಇಲ್ಲ.  ತಾಲಿಬಾನಿಗಳಿಗೆ ರಾಕ್ಷಸಿ ಪ್ರವೃತ್ತಿ ಇರುತ್ತೆ. ಮನುಷ್ಯತ್ವ ಇರಲ್ಲ. ಹೀಗಾಗಿ  ತಾಲಿಬಾನಿಗಳು ಎನ್ನುತ್ತಾರೆ. ಅದೇ ರೀತಿ ಆರ್ ಎಸ್ ಎಸ್ ನವರದ್ದು ತಾಲಿಬಾನ್ ಸಂಸ್ಕೃತಿ, ರಾಕ್ಷಸ ಪ್ರವೃತ್ತಿ ಇದೆ.  ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ  ಎಂದು ಕಿಡಿಕಾರಿದರು.

ಬಿಜೆಪಿ ಮತ್ತು ಆರ್ ಎಸ್ ಎಸ್ ಅನ್ನು ಪದೇ ಪದೇ ತಾಲಿಬಾನಿಗಳ ಸಂಸ್ಕೃತಿಗೆ ಹೋಲಿಕೆ ಮಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.

Key words:  RSS- Taliban culture-former CM- siddaramaiah-bagalakote