ಡಾರ್ಲಿಂಗ್ ಕೃಷ್ಣ ಸಿನಿಮಾದ ಟೈಟಲ್ ಲಾಂಚ್ ಮಾಡಿದ ರವಿ ಡಿ ಚೆನ್ನಣ್ಣನವರ್

ಬೆಂಗಳೂರು, ಸೆಪ್ಟೆಂಬರ್ 28, 2021 (www.justkannada.in): ನಟ ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ ಶೀರ್ಷಿಕೆ ಬಿಡುಗಡೆಯಾಗಿದೆ.

ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರು ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ ಟೈಟಲ್ ಅನಾವರಣಗೊಳಿಸಿದ್ದಾರೆ.

ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆಗೆ ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಇದು ಲವ್ ಸ್ಟೋರಿ ಇರುವ ಸಿನಿಮಾವಾಗಿದ್ದು, ಅಕ್ಟೋಬರ್ 4 ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಸೋಮವಾರ ಸಂಜೆ ನಡೆದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಪಾಲ್ಗೊಂಡು ಟೈಟಲ್ ಅನಾವರಣ ಮಾಡಿದರು.

key words: ips officer Ravi D Channannavar launch title of Darling Krishna movie