Friday, October 9, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Front Page ಮುಗ್ಧ ಮುಸ್ಲೀಂರ ವೋಟಿಗಾಗಿ ಆರ್.ಎಸ್ ಎಸ್ ಮತ್ತು ಬಿಜೆಪಿಯನ್ನ ಬೈತಾರೆ: ಸಿದ್ಧು-ಹೆಚ್.ಡಿಕೆ ವಿರುದ್ಧ ಕೇಂದ್ರ ಸಚಿವ...

ಮುಗ್ಧ ಮುಸ್ಲೀಂರ ವೋಟಿಗಾಗಿ ಆರ್.ಎಸ್ ಎಸ್ ಮತ್ತು ಬಿಜೆಪಿಯನ್ನ ಬೈತಾರೆ: ಸಿದ್ಧು-ಹೆಚ್.ಡಿಕೆ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ.

ಧಾರವಾಡ,ಅಕ್ಟೋಬರ್,16,2021(www.justkannada.in):  ಮುಗ್ಧ ಮುಸ್ಲೀಂರ ವೋಟಿಗಾಗಿ ಆರ್.ಎಸ್ ಎಸ್ ಮತ್ತು ಬಿಜೆಪಿಯನ್ನ ಬೈತಾರೆ. ಇದಕ್ಕಾಗಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಸ್ಪರ್ಧೆಗಿಳಿದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.

ಧಾರವಾಡದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಮತ್ತು ಆರ್ ಎಸ್ ಎಸ್ ಮುಸ್ಲೀಂರ ವಿರೋಧಿ ಅಲ್ಲ. ಯಾವುದೇ ಸಮುದಾಯದ ವಿರುದ್ದವೂ ಅಲ್ಲ. ಮುಗ್ಧ ಮುಸ್ಲೀಂರ ವೋಟಿಗಾಗಿ ಆರ್.ಎಸ್ ಎಸ್ ಮತ್ತು ಬಿಜೆಪಿಯನ್ನ ಬೈತಾರೆ. ಕಾಂಗ್ರೆಸ್ ಜೆಡಿಎಸ್ ಗೆ ವೊಟ್ ಬ್ಯಾಂಕ್ ಕಡಿಮೆಯಾಗಿದೆ. ಹೀಗಾಗಿ ಆರ್ ಎಸ್ ಎಸ್, ಬಿಜೆಪಿಯನ್ನ ಭೂತದಂತೆ ತೋರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜನಸಂಖ್ಯೆ ನಿಯಂತ್ರಣ ಸಂಬಂಧ ಮೋಹನ್ ಭಾಗವತ ಹೇಳಿಕೆ  ಸತ್ಯವಾದದ್ದು. ಎಲ್ಲಾ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಲಿ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words: RSS – BJP –congress- Vote -Innocent –Muslim-Union minister -Prahlad Joshi