ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ಕ್ರಮಕ್ಕೆ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದ ಅಪರ ಮುಖ್ಯ ಕಾರ್ಯದರ್ಶಿ.

 

ಬೆಂಗಳೂರು, ಅ.17, 2021 : ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಅಕ್ರಮವಾಗಿ ದೇವಸ್ಥಾನ ನಿರ್ಮಾಣ ಮಾಡುತ್ತಿರುವ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.

ರಾಜ್ಯ ಸರಕಾರದ ಒಳಾಡಳಿತ ವಿಭಾಗದ ಅಪರ ಮುಖ್ಯಕಾರ್ಯದರ್ಶಿ ಅವರ ಸೂಚನೆ ಮೇರೆಗೆ, ಅಧೀನ ಕಾರ್ಯದರ್ಶಿ ಎಂ.ಆರ್.ಶೋಭ ಅವರು ಸೆ. 07 ರಂದು ಈ ಪತ್ರ ಬರೆದಿದ್ದಾರೆ. ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದ ವಿವರ ಹೀಗಿದೆ…

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖಿತ ಪತ್ರವನ್ನು ಇದರೊಂದಿಗೆ ಲಗತ್ತಿಸಿದ ಸದರಿ ಪತ್ರದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಉಚ್ಚನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಜನರನ್ನು ಎತ್ತಿಕಟ್ಟಿ ಶ್ರೀರಂಗಪಟ್ಟಣ ಜೀವರ್ಗಿ ರಾಷ್ಟ್ರೀಯ ಹಬ್ಬಾರಿ 150(ಎ)ರ ಜಕ್ಕನಹಳ್ಳಿ ಸರ್ಕಲ್ ಹೆಬ್ಬಾರಿಯಲ್ಲಿಯ ಗಣಪತಿ ದೇವಸ್ಥಾನವನ್ನು ಅಕ್ರಮವಾಗಿ ನಿರ್ಮಾಣ ಮಾಡುತ್ತಿದ್ದು, ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳದ ಪಾಂಡವಪುರ ತಾಲ್ಲೂಕು ತಹಸೀಲ್ದಾರ್, ಪಾಂಡವಪುರ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ, ಮೇಲುಕೋಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್, ಜಕ್ಕನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಕಾನೂನು ಕ್ರಮ ತೆಗೆದುಕೊಂಡು ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಹೆದ್ದಾರಿ ಜಾಗದಲ್ಲಿ ಗಣಪತಿ ದೇವಸ್ತಾನವನ್ನು ಖುದ್ದಾಗಿ ಸ್ಥಳದಲ್ಲಿದ್ದು, ರಾತ್ರಿ ಹಗಲು ನಿರ್ಮಾಣ ಮಾಡುತ್ತಿರುವ ಶಾಸಕರಾದ ಶ್ರೀ ಸಿ.ಎಸ್.ಪುಟ್ಟರಾಜು ಮತ್ತು ಅವರ ಬೆಂಬಲಿಗರ ವಿರುದ್ಧ ಕಾನೂನು ರೀತ: ಕ್ರಮತೆಗೆದುಕೊಂಡು ಅಕ್ರಮವಾಗಿ ಕಟ್ಟುತ್ತಿರುವ ದೇವಸ್ಥಾನವನ್ನು ತಕ್ಷಣ ತೆರವುಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ.

ಸದರಿ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಕೈಗೊಂಡ ಕುಮದ ಕುರಿತು ಹಿಂಬರಹವನ್ನು ಅರ್ಜಿದಾರರಿಗೆ ಮತ್ತು ಸರ್ಕಾರಕ್ಕೆ ಸಲ್ಲಿಸುವಂತೆ ತಮ್ಮನ್ನು ಕೋರಲು ನಿರ್ದೇಶಿತಳಾಗಿದ್ದೇನೆ.

ತಮ್ಮ ನಂಬುಗೆಯ
(ಎಂ.ಆರ್.ಶೋಭಾ)

key words : Karnataka-Bangalore-chief.secretory-letter-director.general.of.police-DGP-mandya-court