Sunday, August 2, 2026

BDA Apartments

Home Front Page ಜೆಡಿಎಸ್ ಮೂಲಕ ಬಿಜೆಪಿ, ಆರ್ ಎಸ್ ಎಸ್ ಅಜೆಂಡಾ ಅನುಷ್ಠಾನ- ಮಾಜಿ ಸಚಿವ ಯುಟಿ ಖಾದರ್...

ಜೆಡಿಎಸ್ ಮೂಲಕ ಬಿಜೆಪಿ, ಆರ್ ಎಸ್ ಎಸ್ ಅಜೆಂಡಾ ಅನುಷ್ಠಾನ- ಮಾಜಿ ಸಚಿವ ಯುಟಿ ಖಾದರ್ ಟೀಕೆ.

ಹಾವೇರಿ,ಅಕ್ಟೋಬರ್,16,2021(www.justkannada.in):  ಜೆಡಿಎಸ್ ಮೂಲಕ ಬಿಜೆಪಿ, ಆರ್ ಎಸ್ ಎಸ್ ಅಜೆಂಡಾ ಅನುಷ್ಠಾನ ಮಾಡಲಾಗುತ್ತಿದೆ.  ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಹಿಂದೆ ಯಾರಿದ್ದಾರೆಂದು ಜನರಿಗೆ ಗೊತ್ತಿದೆ.  ಬೈ ಎಲೆಕ್ಷನ್ ನಲ್ಲಿ ಜನರೇ ಅವರಿಗೆ ಪಾಠ ಕಲಿಸಿತ್ತಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ತಿಳಿಸಿದರು.

ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವೆಸಗಲಾಗುತ್ತಿದೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಸಚಿವ ಯು.ಟಿ. ಖಾದರ್, ಚುನಾವಣೆ ಸಮೀಪಿಸುತ್ತಿದ್ದಂತೆ ಕುಮಾರಸ್ವಾಮಿಗೆ ಇವೆಲ್ಲ ನೆನಪಾಗುತ್ತೆ, ಮೊದಲು ಅವರ ಪಕ್ಷವನ್ನು ನೋಡಿಕೊಳ್ಳಲಿ  ಎಂದು ಕಿಡಿಕಾರಿದರು.Congress -not - injustice –poor-UT Khadar- outrage - food minister –Umesh katti

ಕುಮಾರಸ್ವಾಮಿ ಚುನಾವಣೆ ಬಂದಾಗ ಮಾತ್ರ ಇಂತಹ ಹೇಳಿಕೆ ನೀಡುತ್ತಿರುವುದರ ಹಿಂದಿನ ಉದ್ದೇಶವೇನು ? ನಮ್ಮ ಪಕ್ಷದ ಬಗ್ಗೆ ಆರೋಪ ಮಾಡುವ ಬದಲು ಅವರ ಪಕ್ಷದ ಬಗ್ಗೆ ಮೊದಲು ನೋಡಿಕೊಳ್ಳಲಿ. ನಮ್ಮ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದ್ದರೆ, ಸಮಸ್ಯೆಯಾಗಿದ್ದರೆ ಅದನ್ನು ಬಗೆಹರಿಸಲು ನಮ್ಮ ಪಕ್ಷದ ರಾಜ್ಯ ನಾಯಕರು, ಶಾಸಕರು, ಕಾರ್ಯಕರ್ತರಿದ್ದಾರೆ. ನಮ್ಮ ಬಗ್ಗೆ ಮಾತನಾಡುವ ಮೊದಲು ಕುಮಾರಸ್ವಾಮಿ ಜೆಡಿಎಸ್ ನಲ್ಲಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಟಾಂಗ್ ನೀಡಿದರು.

Key words: Implementation – BJP- RSS -agenda -through –JDS-Former Minister- UT Khader